ಟೆಹ್ರಾನ್, ಜು. 15 (DaijiworldNews/AA): ಅಮೆರಿಕ ತನ್ನ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಇರಾನ್, ಅಮೆರಿಕದೊಂದಿಗಿನ ತಿಳಿವಳಿಕೆ ಒಪ್ಪಂದದಿಂದ ತಾನು ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದೆ.

ಬುಧವಾರ ಮುಂಜಾನೆ ಅಮೆರಿಕ ಪಡೆಗಳು ಇರಾನಿನ ಬಂದರುಗಳ ಮೇಲೆ ಕಠಿಣ ನೌಕಾ ದಿಗ್ಬಂಧನವನ್ನು ಮರುಸ್ಥಾಪಿಸಿದೆ. ಇದರ ಬೆನ್ನಲ್ಲೇ ಹಾಮರ್ಮಜ್ ಜಲಸಂಧಿಯಲ್ಲಿ ಉಭಯ ಸೇನೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ.
"ಎಷ್ಟೇ ಭಾರಿ ಬೆಲೆ ತೆರಬೇಕಾಗಿ ಬಂದರೂ ಸರಿ, ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಸಂಪೂರ್ಣ ಏಕಸ್ವಾಮ್ಯವನ್ನು ಚಲಾಯಿಸಲಿದೆ. ಯುದ್ಧದ ಸಮಯದಲ್ಲಿ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನೆರೆಯ ಒಮಾನ್ ದೇಶಕ್ಕೆ ಸೇರಿದ ಅರ್ಧದಷ್ಟು ಜಲಮಾರ್ಗವೂ ಇನ್ಮುಂದೆ ಇರಾನ್ ನಿಯಂತ್ರಣದಲ್ಲೇ ಇರಲಿದೆ" ಎಂದು ಇರಾನ್ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ತಿಳಿಸಿದ್ದಾರೆ.
"ಇರಾನ್ ತನ್ನ ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅಮೆರಿಕದ ಮುಂದೆ ಮಂಡಿಯೂರಿ ಮಾತುಕತೆ ನಡೆಸಿ ಎಂದು ಭಿಕ್ಷೆ ಬೇಡುವುದಿಲ್ಲ" ಎಂದು ಅವರು ಹೇಳಿದ್ದಾರೆ.