ಖಾನಾಪುರ, ಜು. 13 (DaijiworldNews/AA): ಬೆಳಗಾವಿ ಯುವಕನೋರ್ವ ತನ್ನ ರೂಮ್ಮೇಟ್ನಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ಖಾನಾಪುರ ಪಟ್ಟಣದ ನಿವಾಸಿ ಸಾಹಿಲ್ ರಿಯಾಜ್ ಅಹ್ಮದ್ ಮೋಮಿನ್ (25) ಮೃತ ದುರ್ದೈವಿ.
ಮೃತ ಯುವಕ ನೇಪಾಳದ ಹೋಟೆಲ್ ಕೆಲಸಕ್ಕೆ ತೆರಳಿದ್ದ. ಜೊತೆಗಿದ್ದ ರೂಮ್ಮೇಟ್ ಆತನನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸಾಯಿಲ್ ಶವವನ್ನು ಭಾರತ ತರುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.