ವಾಷಿಂಗ್ಟನ್, ಜು. 11 (DaijiworldNews/AK): ಕೌಟುಂಬಿಕ ಕಲಹಕ್ಕೆ ಭಾರತೀಯ ಮೂಲದ ಟೆಕ್ಕಿ ಮಹಿಳೆಯೊಬ್ಬರು ಪತಿಯ ಗುಂಡೇಟಿಗೆ ಬಲಿಯಾಗಿರುವ ಘಟನೆ ಜಾರ್ಜಿಯಾದಲ್ಲಿ ನಡೆದಿದೆ.

ಶೀತಲ್ ವ್ರ್ಜೆಸಿಯನ್ ಹತ್ಯೆಯಾದ ಟೆಕ್ಕಿ. ಪತ್ನಿ ಕೊಂದ ಪತಿ, 23 ವರ್ಷದ ಪುತ್ರನಿಗೂ ಗುಂಡು ಹಾರಿಸಿದ್ದ. ಗಾಯಗೊಂಡಿದ್ದ ಯುವಕ ಜಾರ್ಜಿಯಾದ ಲಾರೆಲ್ ಕ್ರೀಕ್ ಟ್ರಯಲ್ ನೆರೆಹೊರೆಯಲ್ಲಿ ಜನರಿಂದ ಸಹಾಯಕ್ಕಾಗಿ ಅಂಗಲಾಚಿದ್ದ.
ಕೊಲೆ ಆರೋಪಿ 56 ವರ್ಷದ ಕಿರ್ಕ್ ಬಿ ವ್ರ್ಜೆಸಿಯನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿರ್ಕ್ ವಿರುದ್ಧ ಕೊಲೆ, ಎರಡು ತೀವ್ರತರವಾದ ಹಲ್ಲೆ ಆರೋಪಗಳನ್ನು ಹೊರಿಸಲಾಗಿದೆ. ಆರೋಪಿಯನ್ನು ಕಾಬ್ ಕೌಂಟಿ ವಯಸ್ಕರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.