ವಾಷಿಂಗ್ಟನ್, ಜೂ. 01 (DaijiworldNews/AA): ಅಮೆರಿಕಸೇನೆಯು ಇರಾನ್ನ ರಾಡಾರ್ ಮತ್ತು ಡ್ರೋನ್ ತಾಣಗಳ ಮೇಲೆ ಶಕ್ತಿಶಾಲಿ 'ಆತ್ಮರಕ್ಷಣಾ ದಾಳಿ' ನಡೆಸಿದೆ. ಈ ಕಾರ್ಯಾಚರಣೆಯು ಅತ್ಯಂತ ಯೋಜಿತ ಹಾಗೂ ನಿಖರವಾಗಿದ್ದು, ಯಾವುದೇ ಅಮೇರಿಕದ ಮಿಲಿಟರಿ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಎಂಕ್ಯೂ-1 ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ನ ಗೊರುಕ್ ಮತ್ತು ಕ್ವೆಶ್ಮ್ ದ್ವೀಪಗಳಲ್ಲಿರುವ ಕೇಂದ್ರಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಕಮಾಂಡ್ ಪ್ರಕಟಿಸಿದೆ.
ದಾಳಿಯಲ್ಲಿ ಇರಾನ್ನ ವಾಯು ರಕ್ಷಣಾ ವ್ಯವಸ್ಥೆ, ಡ್ರೋನ್ ನಿಯಂತ್ರಣ ಕೇಂದ್ರ ಹಾಗೂ ಎರಡು ದಾಳಿ ನಡೆಸುವ ಡ್ರೋನ್ಗಳನ್ನು ನಾಶಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ಅಮೆರಿಕ ಸೇನಾ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದೆ.