ವಾಷಿಂಗ್ಟನ್, ಏ. 24 (DaijiworldNews/AA): ಹಾರ್ಮುಜ್ ಜಲಸಂಧಿಯಲ್ಲಿ ಸಮದ್ರ ಬಾಂಬ್ ಹಾಕುವ ಯಾವುದೇ ಇರಾನಿನ ಬೋಟ್ಗಳನ್ನು ಕಂಡ ತಕ್ಷಣ ಗುಂಡು ಹಾರಿಸಿ ಕೊಲ್ಲಿ ಎಂದು ಅಮೆರಿಕದ ನೌಕಾಪಡೆಗೆ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ, ಅಂತರಾಷ್ಟ್ರೀಯ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮೈನ್ಗಳನ್ನು ಅಳವಡಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಈ ಚಟುವಟಿಕೆಯನ್ನು ತಡೆಗಟ್ಟುವ ಸಲುವಾಗಿ, 'ಯಾವುದೇ ಸಣ್ಣ ದೋಣಿಗಳಿರಲಿ ಅವುಗಳು ಬಾಂಬ್ ಇರಿಸುತ್ತಿರುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಹೊಡೆದು ಹಾಕಿ' ಎಂದು ಟ್ರಂಪ್ ನಿರ್ದೇಶಿಸಿದ್ದಾರೆ.
ಟ್ರಂಪ್ ಅವರ ಈ ಎಚ್ಚರಿಕೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಒಂದು ಬ್ಯಾರೆಲ್ ದರ 100 ಡಾಲರ್ಗಿಂತಲೂ ಅಧಿಕವಾಗಿದೆ.