ಟೆಹ್ರಾನ್/ವಾಷಿಂಗ್ಟನ್, ಏ. 23 (DaijiworldNews/AA): ಅಮೆರಿಕದ ನೌಕಾಪಡೆಯ ಕಾರ್ಯದರ್ಶಿ ಜಾನ್ ಫೆಲನ್ ತಮ್ಮ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಫೆಲನ್ ಅವರಿಂದ ತೆರವಾದ ಸ್ಥಾನಕ್ಕೆ ಅಧೀನ ಕಾರ್ಯದರ್ಶಿ ಹಂಗ್ ಕಾವೊ ನೌಕಾಪಡೆಯ ಹಂಗಾಮಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ನೌಕಾಪಡೆಯ ಕಾರ್ಯದರ್ಶಿ ಜಾನ್ ಸಿ. ಫೆಲನ್ ಯುಎಸ್ ಆಡಳಿತವನ್ನು ತೊರೆಯುತ್ತಿದ್ದಾರೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ಫೆಲನ್ ಅವರು ಸಲ್ಲಿಸಿದ ಸೇವೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ಭವಿಷ್ಯದಲ್ಲಿ ಅವರ ಪ್ರಯತ್ನಗಳು ಸುಃಖಕರವಾಗಿರಲಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇರಾನ್ನೊಂದಿಗೆ 2ನೇ ಸುತ್ತಿನ ಮಾತುಕತೆ ಕುರಿತು ಶುಕ್ರವಾರದ ವೇಳೆಗೆ ಒಳ್ಳೆಯ ಸುದ್ದಿ ಬರಬಹುದು. 36 ರಿಂದ 72 ಗಂಟೆಗಳೊಳಗೆ ಶಾಂತಿ ಮಾತುಕತೆ ಪುನರಾರಂಭಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ನಡುವೆಯೇ ಅಮೆರಿಕದ ನೌಕಾಪಡೆಯ ಕಾರ್ಯದರ್ಶಿ ಸ್ಥಾನಕ್ಕೆ ಫೆಲನ್ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ.