ಟೋಕಿಯೊ, ಏ. 20 (DaijiworldNews/AA): ಉತ್ತರ ಜಪಾನ್ನಲ್ಲಿ ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜಪಾನ್ನ ಹವಾಮಾನ ಸಂಸ್ಥೆ (ಜೆಎಂಎ) ಮಾಹಿತಿ ನೀಡಿದೆ. ಮೂರು ಮೀಟರ್ (10 ಅಡಿ) ಎತ್ತರದ ಅಲೆಗಳ ಸುನಾಮಿ ಮುನ್ನೆಚ್ಚರಿಕೆ ನೀಡಿದೆ.

ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರದಲ್ಲಿ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿದೆ. ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊದವರೆಗಿನ ದೊಡ್ಡ ಕಟ್ಟಡಗಳು ಕಂಪಿಸುವಷ್ಟು ಭೂಕಂಪ ಪ್ರಬಲವಾಗಿತ್ತು ಎಂದು ಹೇಳಲಾಗಿದೆ.
ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು. ಸುನಾಮಿ ಅಲೆಗಳಿಂದ ಹಾನಿಯಾಗುವ ನಿರೀಕ್ಷೆಯಿದೆ. ತಕ್ಷಣ ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.