ವಾಷಿಂಗ್ಟನ್, ಏ. 13 (DaijiworldNews/AA): ಇರಾನ್ ಮಾತುಕತೆಗೆ ಮರಳುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನನಗೆ ಕಿಂಚಿತ್ತೂ ಕಳವಳವಿಲ್ಲ. ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಫ್ಲೋರಿಡಾದಿಂದ ಹಿಂದಿರುಗಿದ ನಂತರ ಜಂಟಿ ಬೇಸ್ ಆಂಡ್ರ್ಯೂಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಇರಾನ್ ಮಾತುಕತೆಯ ಮೇಜಿಗೆ ಮರಳುತ್ತದೆಯೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಅವರು ಬರದಿದ್ದರೆ ನನಗೇನು ನಷ್ಟವಿಲ್ಲ, ಏನೇ ಆದರೂ ಅಂತಿಮವಾಗಿ ನಾವೇ ಗೆಲ್ಲುತ್ತೇವೆ" ಎಂದರು.
"ಇಸ್ಲಾಮಾಬಾದ್ನಲ್ಲಿ ನಡೆದ 21 ಗಂಟೆಗಳ ಮಾತುಕತೆಯಲ್ಲಿ ಇರಾನ್ ಇನ್ನೂ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಆಸಕ್ತಿ ಹೊಂದಿದೆ ಎಂಬುದು ಸಾಬೀತಾಗಿದೆ. ಆದರೆ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.