ವಾಷಿಂಗ್ಟನ್, ಏ. 12 (DaijiworldNews/AA): ಅಮೆರಿಕ, ಇರಾನ್ ಮತ್ತು ಚೀನಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಇರಾನ್ಗೆ ಶಸ್ತ್ರಾಸ್ತ್ರ ನೀಡದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

"ಷಿ ಜಿನ್ಪಿಂಗ್ ಅವರೇ, ಇರಾನ್ಗೆ ಶಸ್ತ್ರಾಸ್ತ್ರ ನೀಡುವ ಸಾಹಸ ಮಾಡಬೇಡಿ, ಇಲ್ಲದಿದ್ದರೆ ನೀವು ಊಹಿಸಲಾಗದ ಸಂಕಷ್ಟಕ್ಕೆ ಸಿಲುಕುತ್ತೀರಿ. ಯಾರು ಎಷ್ಟೇ ಬಲಪ್ರಯೋಗ ಮಾಡಿದರೂ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವೇ ಗೆಲ್ಲಲಿದೆ. ಇರಾನ್ ರಾಜಿ ಮಾಡಿಕೊಳ್ಳಲು ಮಾತ್ರ ಅಸ್ತಿತ್ವದಲ್ಲಿದೆ. ಅದು ಒಪ್ಪದಿದ್ದರೆ ನಾವು ಅದನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್ಗಳನ್ನು ಅಳವಡಿಸಿ ಜಾಗತಿಕ ತೈಲ ಸಾರಿಗೆಯನ್ನು ತಡೆಯಲು ಯತ್ನಿಸುತ್ತಿದೆ. ಆ ಮಾರ್ಗವನ್ನು ನಿರ್ಬಂಧಿಸಲು ನಾವು ಬಿಡುವುದಿಲ್ಲ" ಎಂದು ಹೇಳಿದ್ದಾರೆ.