ಲೆಬನಾನ್, ಏ. 08 (DaijiworldNews/AK): ಕದನವಿರಾಮದ ಬಳಿಕವೂ ಲೆಬನಾನ್ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಇಸ್ರೇಲ್ ವಾಯುದಾಳಿಯಿಂದ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಲೆಬನಾನ್ ಮೇಲಿನ ದಾಳಿ ಹೀಗೆಯೇ ಮುಂದುವರಿಯುತ್ತದೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಲೆಬನಾನ್ನಲ್ಲಿರುವ ಹಿಜಬೊಲ್ಲಾಹ ಉಗ್ರರ ಸರ್ವನಾಶವಾಗೋವರೆಗೆ ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಕದನ ವಿರಾಮ ಏರ್ಪಟ್ಟರೂ ಲೆಬನಾನ್ನ ಮೇಲಿನ ಇಸ್ರೇಲ್ ದಾಳಿಗೆ ಲೆಬನಾನ್ ಸರ್ಕಾರ ಹಾಗೂ ಹಿಜಬೊಲ್ಲಾಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮದಲ್ಲಿ ಲೆಬನಾನ್ ಸೇರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.