ಟೆಹ್ರಾನ್, ಏ. 06 (DaijiworldNews/AA): ಅಮೆರಿಕ - ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆಯಾಗಿದ್ದಾರೆ ಎಂದು ಐಆರ್ಜಿಸಿ ಅಧಿಕೃತವಾಗಿ ತಿಳಿಸಿದೆ.

ಇರಾನ್ ದಾಳಿಗೆ ಪ್ರತೀಕಾರವಾಗಿ ಸೋಮವಾರ ಟೆಹ್ರಾನ್ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಸತತವಾಗಿ ವಾಯುದಾಳಿ ನಡೆಸುತ್ತಿವೆ. ಘರ್ಷಣೆ ತೀವ್ರಸ್ವರೂಪ ಪಡೆದುಕೊಂಡಿರುವ ನಡುವೆಯೇ ಗುಪ್ತಚರ ಮುಖ್ಯಸ್ಥ ಹತ್ಯೆಯಾಗಿದ್ದಾರೆ. ಇನ್ನು ಖಾದೇಮಿ ಸಾವನ್ನಪ್ಪಿದ್ದ ಸ್ಥಳದ ಬಗ್ಗೆ ಐಆರ್ಜಿಸಿ ಯಾವುದೇ ಸುಳಿವು ನೀಡಿಲ್ಲ.
ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಮಜೀದ್ ಖಾದೇಮಿ ಇಂದು ಮುಂಜಾನೆ ಅಮೆರಿಕ-ಇದ್ರೇಲ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಐಆರ್ಜಿಸಿ ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್ನಲ್ಲಿ ಮಾಹಿತಿ ನೀಡಿದೆ.