ಟೆಹ್ರಾನ್, ಏ. 03 (DaijiworldNews/AA): ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್ನ ಅಲ್ಬೋರ್ಜ್ ಪ್ರಾಂತ್ಯದಲ್ಲಿ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿಯಿಂದಾಗಿ ಕರಾಜ್ನಲ್ಲಿರುವ ಬಿ1 ಸೇತುವೆ ಸಂಪೂರ್ಣ ಧ್ವಂಸವಾಗಿದೆ.

ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿಯಿಂದ ಗಣನೀಯ ಹಾನಿಯುಂಟಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಯುದ್ಧ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರು.
"ಇರಾನ್ ಮೇಲಿನ ದಾಳಿ ಮುಂದುವರೆಸಲಾಗುವುದು. ಹಾರ್ಮುಜ್ ಜಲಸಂಧಿಯಿಂದ ತಮಗೇನು ಉಪಯೋಗವಿಲ್ಲ, ನಮ್ಮ ಹಡಗುಗಳೇನು ಅಲ್ಲಿಂದ ಬರುವುದಿಲ್ಲ, ನಮ್ಮಲ್ಲೇ ಬೇಕಾದಷ್ಟು ತೈಲ ಇದೆ, ನೀವೇ ಬೇಕಿದ್ದರೆ ನಮ್ಮಿಂದ ತೈಲ ಖರೀದಿಸಿ" ಎಂದು ಟ್ರಂಪ್ ಬೇರೆ ದೇಶಗಳಿಗೆ ಸಲಹೆ ನೀಡಿದ್ದಾರೆ.