ಟೆಹ್ರಾನ್, ಮಾ. 10 (DaijiworldNews/AA): ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ, ಅದು ಏನಿದ್ದರೂ ನಮ್ಮ ನಿರ್ಧಾರ ಎಂದು ಇರಾನ್ನ ಐಆರ್ಜಿಸಿ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ತಿರುಗೇಟು ನೀಡಿದೆ.

ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಐಆರ್ಜಿಸಿ ಪಡೆ, "ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಲೀಟರ್ ತೈಲವನ್ನೂ ರಫ್ತು ಮಾಡಲು ಇರಾನ್ ಅನುಮತಿಸುವುದಿಲ್ಲ" ಎಂದು ಎಚ್ಚರಿಸಿದೆ.
ಇರಾನ್ ಯುದ್ಧವು ಸಾಕಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದ್ದರು. ಇದಾದ ಕೆಲವೇ ಹೊತ್ತಲ್ಲಿ ನಾವು ಸಂಪೂರ್ಣ ಗೆದ್ದಿಲ್ಲ. ಇರಾನ್ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸೋಲುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದು ಟ್ರಂಪ್ ಸೋಮವಾರ ಹೇಳಿಕೆ ನೀಡಿದ್ದರು.
ಟ್ರಂಪ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಐಆರ್ಜಿಸಿ, "ಸಂಘರ್ಷ ಹೇಗೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ವಾಷಿಂಗ್ಟನ್ ಅಲ್ಲ, ಟೆಹ್ರಾನ್ ನಿರ್ಧರಿಸುತ್ತದೆ. ಟ್ರಂಪ್ ಹೇಳಿಕೆ ಅಸಂಬದ್ಧ" ಎಂದು ತಿಳಿಸಿದೆ.