ವಾಷಿಂಗ್ಟನ್, ಮಾ. 07 (DaijiworldNews/ AK):ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಜೋ ಬೈಡನ್ ಹತ್ಯೆಗೆ ಇರಾನ್ ಜೊತೆ ಕೈಜೋಡಿಸಿ ಸಂಚು ರೂಪಿಸಿದ್ದ ಪಾಕಿಸ್ತಾನದ ವ್ಯಕ್ತಿಗೆ ಅಮೆರಿಕದಲ್ಲಿ ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಆಸಿಫ್ ಮರ್ಚೆಂಟ್ (47) ಎಂದು ಗುರುತಿಸಲಾಗಿದೆ. ಈತ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಸೇರಿ ಹತ್ಯೆಗೆ ಮುಂದಾಗಿದ್ದ ಎಂದು ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ. ಸುಪಾರಿ ಹಂತಕರನ್ನು ಹುಡುಕುವಾಗ ಆಸಿಫ್ ಅರಿವಿಲ್ಲದೆ FBI ಏಜೆಂಟ್ಗಳನ್ನು ಸಂಪರ್ಕಿಸಿದ್ದ. ಇದಾದ ನಂತರ ಆತನ ಯೋಜನೆ ವಿಫಲವಾಗಿತ್ತು.
ಒಂದು ವಾರದ ವಿಚಾರಣೆಯ ನಂತರ ಬ್ರೂಕ್ಲಿನ್ನಲ್ಲಿರುವ ನ್ಯಾಯಾಲಯ ಆಸಿಫ್ ಮರ್ಚೆಂಟ್ನನ್ನು ಭಯೋತ್ಪಾದನೆ ಮತ್ತು ಸುಪಾರಿ ಕೊಲೆ ಆರೋಪಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಿತ್ತು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಆರೋಪಿ ಪಾಕಿಸ್ತಾನಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದ್ದ. ಪಾಕಿಸ್ತಾನ ಮತ್ತು ಇರಾನ್ ಎರಡರಲ್ಲೂ ಕುಟುಂಬಗಳನ್ನು ನಿರ್ವಹಿಸುತ್ತಿದ್ದ. ಅಲ್ಲದೇ ವ್ಯವಹಾರಕ್ಕಾಗಿ ಆಗಾಗ ಅಮೆರಿಕಕ್ಕೆ ಬರುತ್ತಿದ್ದ. ಸುಮಾರು ಮೂರು ವರ್ಷಗಳ ಹಿಂದೆ IRGC ಗುಪ್ತಚರರು ಈತನ ಸಂಪರ್ಕಕ್ಕೆ ಬಂದಿದ್ದರು. ಆ ವ್ಯಕ್ತಿಯು ಕಣ್ಗಾವಲು ತರಬೇತಿಯನ್ನು ನೀಡಿ, ಹತ್ಯೆಗೆ ನಿಯೋಜಿಸಿದ್ದ ಎಂದು ವರದಿಯಾಗಿದೆ.