ವಾಷಿಂಗ್ಟನ್, ಮಾ. 04 (DaijiworldNews/AA): ಇರಾನ್ ಟಾರ್ಗೆಟ್ ಮಾಡಿ ನಡೆಸುವ ಕಾರ್ಯಾಚರಣೆಗಳಿಗೆ ವಾಯುನೆಲೆ ಬಳಕೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆ ಸ್ಪೇನ್ ಜೊತೆಗಿನ ವ್ಯಾಪಾರ ಒಪ್ಪಂದ ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.

ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗಿನ ಓವಲ್ ಆಫೀಸ್ ಸಭೆಯಲ್ಲಿ ಮಾತನಾಡಿದ ಅವರು, ಇರಾನ್ ಮೇಲಿನ ದಾಳಿಗೆ ಸ್ಪ್ಯಾನಿಷ್ ಮಿಲಿಟರಿ ನೆಲೆಗಳ ಬಳಕೆಗೆ ಸ್ಪೇನ್ ನಿರಾಕರಿಸಿದೆ. ಹೀಗಾಗಿ, ಅಮೆರಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ನಿರ್ಧಾರಕ್ಕೆ ಸ್ಪೇನ್ನ ಉಪಪ್ರಧಾನ ಮಂತ್ರಿ ಮಾರಿಯಾ ಜೀಸಸ್ ಮಾಂಟೆರೊ ಪ್ರತಿಕ್ರಿಯೆ ನೀಡಿದ್ದು, ನಮ್ಮ ದೇಶವು ಅಮೆರಿಕದ ಸಾಮಂತ ದೊರೆಯಾಗುವುದಿಲ್ಲ. ನಾವು ಯಾವುದೇ ಬೆದರಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.