ದಾವೋಸ್, ಜ. 22 (DaijiworldNews/AA): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಸಿನ ಪೀಸ್ ಆಫ್ ಬೋರ್ಡ್ ಕೊನೆಗೂ ಅಧಿಕೃತವಾಗಿ ಅಸ್ವಿತ್ವಕ್ಕೆ ಬಂದಿದೆ. ಸ್ವಿಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ದೇಶಗಳ ನಾಯಕರು ಸಹಿ ಹಾಕುವ ಮೂಲಕ ಈ ಸಂಘಟನೆಯ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಇದು ಅಂತರರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸುವ ಸಂಸ್ಥೆಯಾಗಿದ್ದು 1 ಬಿಲಿಯನ್ ಡಾಲರ್ ಹಣವನ್ನು ನೀಡಿದೆ ಶಾಶ್ವತ ಸದಸ್ಯತ್ವ ಪಡೆಯಬಹುದು. ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧದ ನಂತರ ಗಾಜಾದ ಪುನರ್ನಿರ್ಮಾಣ ಮತ್ತು ಆಡಳಿತವನ್ನು ಮೇಲ್ವಿಚಾರಣೆ ಮಾಡಲು ಈ ಮಂಡಳಿಯನ್ನು ಮೂಲತಃ ಸ್ಥಾಪಿಸಲಾಗಿತ್ತು. ಇದೀಗ ಇದನ್ನು ಜಾಗತಿಕ ಸಂಘರ್ಷಗಳನ್ನು ಪರಿಹರಿಸುವವರೆಗೆ ವಿಸ್ತರಿಸಲಾಗಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಪರಾಗ್ವೆಯ ಸಂಪ್ರದಾಯವಾದಿ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ, ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್, ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನ್ಯಾನ್ ಮತ್ತು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಈ ಒಕ್ಕೂಟಕ್ಕೆ ಸೇರಲು ಸಹಿ ಮಾಡಿದ್ದಾರೆ. ಪಾಕಿಸ್ತಾನ ಸೇರ್ಪಡೆಗೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದ್ದರೂ ಶಾಂತಿ ಮಂಡಳಿ ಸೇರ್ಪಡೆಗೆ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.
ಅಮೆರಿಕ ಭಾರತ, ಚೀನಾ, ರಷ್ಯಾ ಸೇರಿದಂತೆ ಒಟ್ಟು 50ಕ್ಕಿಂತ ಹೆಚ್ಚು ದೇಶಗಳಿಗೆ ಈ ಮಂಡಳಿ ಸೇರುವಂತೆ ಆಹ್ವಾನಿಸಲಾಗಿತ್ತು. ಈ ಪೈಕಿ 35 ದೇಶಗಳು ಮಂಡಳಿ ಸೇರಲು ಒಪ್ಪಿಕೊಂಡಿವೆ.