ವಾಷಿಂಗ್ಟನ್,,ಜ. 20 (DaijiworldNews/ AK): ಅಮೆರಿಕ ಮತ್ತು ಫ್ರಾನ್ಸ್ ನಡುವಿನ ರಾಜಕೀಯ ಮತ್ತು ರಾಜತಾಂತ್ರಿಕ ಉದ್ವಿಗ್ನತೆ ಮತ್ತೊಮ್ಮೆ ಭುಗಿಲೆದ್ದಂತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ರಾನ್ಸ್ಗೆ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200ರಷ್ಟು ಸುಂಕ ವಿಧಿಸುವ ಕುರಿತು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಗಾಜಾ ಶಾಂತಿ ಮಂಡಳಿಗೆ ಸೇರಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ನಿರಾಕರಿಸಿದ್ದಕ್ಕೆ, ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ. ಯುದ್ಧಪೀಡಿತ ಪ್ರದೇಶಗಳಲ್ಲಿ, ವಿಶೇಷವಾಗಿ ಗಾಜಾದಲ್ಲಿ ಪುನರ್ನಿರ್ಮಾಣ ಮತ್ತು ಶಾಂತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು ಶಾಂತಿ ಮಂಡಳಿಯ ಉದ್ದೇಶವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ನಾನು ಅವರ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ಸುಂಕ ವಿಧಿಸುತ್ತೇನೆ. ಅವರಾಗಿಯೇ ಮಂಡಳಿಗೆ ಸೇರುತ್ತಾರೆ ಅವರನ್ನು ನಾನು ಬಲವಂತಪಡಿಸುವುದಿಲ್ಲ ಎಂದು ಹೇಳಿದರು. ಗಾಜಾದಲ್ಲಿ ಮಂಡಳಿಗೆ ಸೇರಲು ಅಮೆರಿಕದ ಆಹ್ವಾನವನ್ನು ಫ್ರಾನ್ಸ್ ತಿರಸ್ಕರಿಸಿದರೆ, ಸುಂಕದ ರೂಪದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಯು ಅಮೆರಿಕ ಮತ್ತು ಫ್ರಾನ್ಸ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಬಹುದು,