ಸ್ಪೇನ್,ಜ. 19 (DaijiworldNews/AK): ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿತಪ್ಪಿ, ಇನ್ನೊಂದು ಹಳಿ ದಾಟಿ ಮುಂದೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆ ರೈಲು ಕೂಡ ಹಳಿತಪ್ಪಿತು ಎಂದು ಸ್ಪೇನ್ನಅಡಿಫ್ ರೈಲು ಜಾಲ ನಿರ್ವಾಹಕರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದುರಂತದಲ್ಲಿ 21 ಜನರು ಮೃತ್ಯು, ಕನಿಷ್ಠ 73 ಜನರು ಗಾಯಗೊಂಡಿದ್ದಾರೆ ಎಂದು ಆಂಡಲೂಸಿಯಾದ ಉನ್ನತ ತುರ್ತು ಅಧಿಕಾರಿ ಆಂಟೋನಿಯೊ ಸ್ಯಾನ್ಜ್ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.