ಟೆಹ್ರಾನ್,ಜ. 13 (DaijiworldNews/ AK): ಇರಾನ್ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎರಡು ವಾರಗಳ ಕಾಲ ನಡೆದ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿರುವುದು ಇದೇ ಮೊದಲು. ‘ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸಾವಿನ ಹಿಂದೆ ಭಯೋತ್ಪಾದಕರ ಕೈವಾಡವಿದೆ’ ಎಂದು ಇರಾನಿನ ಅಧಿಕಾರಿ ತಿಳಿಸಿದ್ದಾರೆ.
ಕಠಿಣ ಆರ್ಥಿಕ ಪರಿಸ್ಥಿತಿಯಿಂದ ಉಂಟಾದ ಅಶಾಂತಿ, ಕನಿಷ್ಠ ಮೂರು ವರ್ಷಗಳಿಂದ ಇರಾನಿನ ಅಧಿಕಾರಿಗಳಿಗೆ ಅತಿದೊಡ್ಡ ಆಂತರಿಕ ಸವಾಲಾಗಿದೆ. ಕಳೆದ ವರ್ಷ ಇಸ್ರೇಲಿ ಮತ್ತು ಅಮೆರಿಕದ ದಾಳಿಗಳ ನಂತರ ತೀವ್ರಗೊಂಡ ಅಂತರರಾಷ್ಟ್ರೀಯ ಒತ್ತಡದ ನಡುವೆ ಈ ಸಮಸ್ಯೆ ಎದುರಾಗಿದೆ.