ವಾಷಿಂಗ್ಟನ್, ಜ. 07 (DaijiworldNews/AK): ವೆನೆಜುವೆಲಾದಲ್ಲಿರುವ ಮಧ್ಯಂತರ ಸರ್ಕಾರ ಉತ್ತಮ ಗುಣಮಟ್ಟದ 30 ಮಿಲಿಯನ್ನಿಂದ 50 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆ ಬೆಲೆಯಲ್ಲಿ ನಮಗೆ ಮಾರಾಟ ಮಾಡಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ

ಈ ಯೋಜನೆಯನ್ನು ತಕ್ಷಣವೇ ಕಾರ್ಯಗತಗೊಳಿಸಲು ನಾನು ಇಂಧನ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ವೆನೆಜುವೆಲಾದಿಂದ ಸಂಗ್ರಹಣಾ ಹಡಗುಗಳ ಮೂಲಕ ನೇರವಾಗಿ ಅಮೆರಿಕದ ಮಾರುಕಟ್ಟೆಗೆ ತರಲಾಗುತ್ತದೆ ಎಂದಿದ್ದಾರೆ.
ಈ ಹಣವನ್ನು ನಾನು ನಿಯಂತ್ರಿಸುತ್ತೇನೆ. ವೆನೆಜುವೆಲಾ ಮತ್ತು ಅಮೆರಿಕದ ಜನರಿಗೆ ಪ್ರಯೋಜನಕ್ಕೆ ಈ ಹಣವನ್ನು ಬಳಸಲಾಗುತ್ತದೆ ಎಂದು ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ವೆನೆಜುವೆಲಾದಲ್ಲಿದೆ. ಮೂಲ ಸೌಕರ್ಯ ಇಲ್ಲದೇ ಇರುವುದು, ಕಡಿಮೆ ಬೆಲೆ, ರಾಜಕೀಯ ಅನಿಶ್ಚಿತತೆ, ಅಮೆರಿಕದ ನಿರ್ಬಂಧದಿಂದಾಗಿ ವೆನೆಜುವೆಲಾ ತೈಲ ವಿಶ್ವದ ಮಾರುಕಟ್ಟೆಗೆ ಸುಲಭವಾಗಿ ಬರುತ್ತಿರಲಿಲ್ಲ.
ಈ ಮಧ್ಯೆ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಮಂಗಳವಾರ ಯಾವುದೇ ವಿದೇಶಿ ಶಕ್ತಿ ತನ್ನ ದೇಶವನ್ನು ಆಳುತ್ತಿಲ್ಲ ಎಂದಿದ್ದಾರೆ.