ನ್ಯೂಯಾರ್ಕ್, ಜ.01 (DaijiworldNews/AK): ಅಮೆರಿಕದ ಎಡಪಂಥೀಯ ಯುವ ನಾಯಕ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಮೂಲಕ ಅಮೆರಿಕದ ಅತಿದೊಡ್ಡ ನಗರವಾದ ನ್ಯೂಯಾರ್ಕ್ ಚುಕ್ಕಾಣಿ ಹಿಡಿದ ಮೊದಲ ಮುಸ್ಲಿಂ ಮೇಯರ್ ಎಂಬ ಇತಿಹಾಸ ಬರೆದಿದ್ದಾರೆ. 34 ವರ್ಷದ ಡೆಮಾಕ್ರಟಿಕ್ ನಾಯಕ ಮಮ್ದಾನಿ ನಾಲ್ಕು ವರ್ಷಗಳ ಅವಧಿಗೆ ನ್ಯೂಯಾರ್ಕ್ ಮೇಯರ್ ಆಗಿ ಮಧ್ಯರಾತ್ರಿ 12 ಗಂಟೆಗೆ ಸಿಟಿ ಹಾಲ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ಕುರಾನ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದರು.
ಉಗಾಂಡಾದಲ್ಲಿ ಜನಿಸಿ ನ್ಯೂಯಾರ್ಕ್ ನಗರದಲ್ಲಿ ಬೆಳೆದ 34 ವರ್ಷದ ಮಮ್ದಾನಿ, ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿ ಸದಸ್ಯ ಆಗಿದ್ದಾರೆ. ಈ ಮೂಲಕ ನ್ಯೂಯಾರ್ಕ್ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ, ದಕ್ಷಿಣ ಏಷ್ಯಾದ ಮತ್ತು ಮೊದಲ ಆಫ್ರಿಕನ್ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.