ಮೆಕ್ಸಿಕೋ, ಡಿ. 29 (DaijiworldNews/TA): ದಕ್ಷಿಣ ಮೆಕ್ಸಿಕೋದಲ್ಲಿ ಇಂಟರ್ಓಷಿಯಾನಿಕ್ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ಪರಿಣಾಮವಾಗಿ ಪೆಸಿಫಿಕ್ ಮಹಾಸಾಗರವನ್ನು ಮೆಕ್ಸಿಕೋ ಕೊಲ್ಲಿಯೊಂದಿಗೆ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ರೈಲು ನಿಜಾಂಡಾ ಪಟ್ಟಣದ ಬಳಿ ಹಾದುಹೋಗುವಾಗ ಹಳಿ ತಪ್ಪಿರುವುದು ತಿಳಿದು ಬಂದಿದೆ.
ಈ ರೈಲು ಅಪಘಾತವು ಓಕ್ಸಾಕಾ ಮತ್ತು ವೆರಾಕ್ರೂಜ್ ನಡುವಿನ ಮಾರ್ಗದಲ್ಲಿ ಸಂಭವಿಸಿದೆ. ಅಪಘಾತದ ವೇಳೆಯಲ್ಲಿ 241 ಪ್ರಯಾಣಿಕರು ಮತ್ತು 9 ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇಂಟರ್ಓಷಿಯಾನಿಕ್ ರೈಲನ್ನು 2023 ರಲ್ಲಿ ಆಗಿನ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಉದ್ಘಾಟಿಸಿದ್ದರು. ಪ್ರಕರಣದ ಪರಿಶೀಲನೆಗಾಗಿ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.