ಇಂಡೋನೇಷ್ಯಾ, ಡಿ. 22 (DaijiworldNews/AA): ಬಸ್ಸೊಂದು ಅಪಘಾತಕ್ಕೀಡಾಗಿ, 15 ಮಂದಿ ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದ ಜಾವಾ ದ್ವೀಪದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಈ ಬಸ್ 34 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಬಸ್ ಟೋಲ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು, ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು, ನಂತರ ಉರುಳಿದೆ ಎಂದು ವರದಿಯಾಗಿದೆ.
ಅಂತರ-ಪ್ರಾಂತೀಯ ಬಸ್ ರಾಷ್ಟ್ರ ರಾಜಧಾನಿ ಜಕಾರ್ತಾದಿಂದ ದೇಶದ ಐತಿಹಾಸಿಕ ರಾಜ ನಗರಿ ಯೋಗ್ಯಕರ್ತಾಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೆಮರಾಂಗ್ ನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದಲ್ಲಿ ಸಾರಿಗೆ ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಅನೇಕ ವಾಹನಗಳು ಹಳೆಯದಾಗಿರುತ್ತವೆ ಮತ್ತು ಕಳಪೆ ನಿರ್ವಹಣೆಯನ್ನು ಹೊಂದಿವೆ ಮತ್ತು ಸಂಚಾರ ನಿಯಮಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ ಎನ್ನಲಾಗಿದೆ.