ಮಸ್ಕತ್, ಡಿ. 18(DaijiworldNews/TA): ಒಮನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಸ್ಕತ್ನಲ್ಲಿ ಭಾರತೀಯ ವಲಸಿಗರು ಅದ್ದೂರಿಯಾಗಿ ಸ್ವಾಗತ ಕೋರಿದರು. ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಯಕ್ಷಗಾನ, ಹಿಂದಿ ಗೀತೆಗಳು ಹಾಗೂ ವಿವಿಧ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯರು ತ್ರಿವರ್ಣ ಧ್ವಜಗಳನ್ನು ಹಿಡಿದು ‘ಮೋದಿ, ಮೋದಿ’, ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗುತ್ತಾ ಉತ್ಸಾಹದಿಂದ ಹರ್ಷೋದ್ಘಾರ ಮಾಡಿದರು. ದೇಶಭಕ್ತಿ ಮತ್ತು ಸಂಸ್ಕೃತಿಯ ಸೊಗಡು ಮೇಳೈಸಿದ ಈ ಕಾರ್ಯಕ್ರಮ ಮಸ್ಕತ್ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಪ್ರಧಾನಿ ಮೋದಿ ಅವರು ಅಲ್ಲಿದ್ದ ಭಾರತೀಯ ಅನಿವಾಸಿಗಳನ್ನು ಆತ್ಮೀಯವಾಗಿ ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸಿದರು. ವಲಸಿಗರ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಸ್ವಾಗತ ಸಮಾರಂಭದ ಭಾಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಿ ಕಲಾವಿದರ ಶ್ರಮವನ್ನು ಮೆಚ್ಚಿದರು. ಒಮನ್ನಲ್ಲಿರುವ ಭಾರತೀಯ ಸಮುದಾಯದ ಒಗ್ಗಟ್ಟು, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯನ್ನು ಪ್ರತಿಬಿಂಬಿಸಿದ ಈ ಸ್ವಾಗತ ಸಮಾರಂಭ ಎಲ್ಲರ ಗಮನ ಸೆಳೆಯಿತು.