ಇಸ್ಲಾಮಾಬಾದ್, ಡಿ. 02 (DaijiworldNews/AA): ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಗೆ ಪಾಕಿಸ್ತಾನ ಒಂದು ವರ್ಷದ ಅವಧಿ ಮುಗಿದ ಆಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ತೀವ್ರ ಟೀಕೆಗೆ ಗುರಿಯಾಗಿವೆ.

ಆಹಾರ ಸಾಮಗ್ರಿಗಳನ್ನು ವಾಯು ಮತ್ತು ಸಮುದ್ರದ ಮೂಲಕ ರವಾನಿಸಲಾಯಿತು. ಶ್ರೀಲಂಕಾಗೆ ನೆರವು ನೀಡಲಾಗಿದೆ ಎಂದು ಪಾಕಿಸ್ತಾನ ಫೋಟೊ ಜೊತೆ ಪೋಸ್ಟ್ ಶೇರ್ ಮಾಡಿತ್ತು. ಪಾಕ್ ಕಳುಹಿಸಿರುವ ವೈದ್ಯಕೀಯ ಮತ್ತು ಆಹಾರ ಸಾಮಗ್ರಿಗಳಲ್ಲಿ ಬಳಸಲು ಉಪಯುಕ್ತವಲ್ಲದ ಅವಧಿ ಮೀರಿದ ವಸ್ತುಗಳು ಸೇರಿವೆ ಎಂಬುದು ಬೆಳಕಿಗೆ ಬಂದಿದೆ.
ಪಾಕಿಸ್ತಾನ ಹೈಕಮಿಷನ್ ಶ್ರೀಲಂಕಾ ಹಂಚಿಕೊಂಡ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ. ನಿಜವಾಗಿಯೂ ನೆರವು ನೀಡಬೇಕೆಂಬ ಉದ್ದೇಶ ಇತ್ತೆ ಅಥವಾ ಹಳೆಯ ದಾಸ್ತಾನುಗಳನ್ನು ತೊಂದರೆಗೊಳಗಾದ ನೆರೆಹೊರೆಯವರ ಮೇಲೆ ಸುರಿಯಲಾಗುತ್ತಿದೆಯೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಹೈಕಮಿಷನ್ ಶ್ರೀಲಂಕಾ ಪೋಸ್ಟ್ ಡಿಲೀಟ್ ಮಾಡಿದೆ.