ವಾಷಿಂಗ್ಟನ್, ಡಿ. 01 (DaijiworldNews/TA): ಅಮೆರಿಕದ ಬೆಳವಣಿಗೆಯಲ್ಲಿ ಭಾರತೀಯರ ಪ್ರತಿಭೆ ಅಪಾರ ಕೊಡುಗೆ ನೀಡಿದೆ ಎಂದು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಪ್ರಶಂಸಿಸಿದ್ದಾರೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಮಸ್ಕ್, “ಅಮೆರಿಕಕ್ಕೆ ಬಂದಿರುವ ಪ್ರತಿಭಾವಂತ ಭಾರತೀಯರಿಂದ ದೇಶವು ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆದಿದೆ” ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ಅಕ್ರಮ ವಲಸಿಗರ ವಿರುದ್ಧದ ಕ್ರಮಗಳು ಮತ್ತು H-1B ವೀಸಾ ನೀತಿಯ ಬದಲಾವಣೆಗಳಿಂದಾಗಿ, ಮಸ್ಕ್ ಅವರ ಈ ಅಭಿಪ್ರಾಯಗಳು ವಿಶೇಷ ಗಮನ ಸೆಳೆದಿವೆ.
H-1B ವೀಸಾ ದುರುಪಯೋಗದ ಬಗ್ಗೆ ಮಾತನಾಡಿದ ಅವರು, “ಕೆಲವು ಹೊರಗುತ್ತಿಗೆ ಕಂಪನಿಗಳು ವ್ಯವಸ್ಥೆಯನ್ನು ತಪ್ಪಾಗಿ ಬಳಸಿವೆ. ಆದರೆ ಅದನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಪರಿಹಾರವಲ್ಲ, ಬದಲಿಗೆ ವ್ಯವಸ್ಥೆಯಲ್ಲಿ ನಡೆಯುತ್ತಿರುವ ‘ಆಟ’ವನ್ನು ನಿಲ್ಲಿಸಬೇಕು” ಎಂದು ಅಭಿಪ್ರಾಯಪಟ್ಟರು. ಅಮೆರಿಕದ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ವಲಯಗಳಲ್ಲಿ ಭಾರತೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಮಸ್ಕ್ ಅವರ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿವೆ.