ಟೋಕಿಯೊ,ನ. 27 (DaijiworldNews/ AK): ಜಪಾನಿನ ಹೈಕೋರ್ಟ್ ದೇಶದ ಸಲಿಂಗ ವಿವಾಹ ನಿಷೇಧವನ್ನು ಸಾಂವಿಧಾನಿಕವಾಗಿ ಎತ್ತಿಹಿಡಿದಿದೆ. ದೇಶಾದ್ಯಂತ ದಾಖಲಾಗಿರುವ ಆರು ರೀತಿಯ ಮೊಕದ್ದಮೆಗಳಲ್ಲಿ ಟೋಕಿಯೊ ಹೈಕೋರ್ಟ್ ಸರ್ಕಾರದ ನಿಲುವನ್ನು ಬೆಂಬಲಿಸಿದೆ.

ಸಲಿಂಗ ಜೋ ಮದುವೆಯಾಗುವುದನ್ನು ತಡೆಯುವ ಪ್ರಸ್ತುತ ನಾಗರಿಕ ಕಾನೂನು ನಿಬಂಧನೆಗಳು ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಲ್ಲಿ ಸಮಂಜಸವಾಗಿಯೇ ಇವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸಪ್ಪೊರೊ, ಟೋಕಿಯೊ, ನಗೋಯಾ, ಒಸಾಕಾ ಮತ್ತು ಫುಕುವೋಕಾದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಸಿಗದಿರುವುದನ್ನು ಅಸಂವಿಧಾನಿಕ ಎಂದಿದ್ದ ಹಿಂದಿನ ಹೈಕೋರ್ಟ್ ತೀರ್ಪುಗಳಿಗೆ ಇದು ವ್ಯತಿರಿಕ್ತವಾಗಿದೆ.
ಸಲಿಂಗ ವಿವಾಹದ ಸುತ್ತಲಿನ ಸಮಸ್ಯೆಗಳನ್ನು ಮೊದಲು ಸಂಸತ್ತಿನಲ್ಲಿ ಕೂಲಂಕಷವಾಗಿ ಚರ್ಚಿಸಬೇಕು ಎಂದು ಆರು ಮೊಕದ್ದಮೆಗಳಲ್ಲಿ ಅಂತಿಮ ತೀರ್ಪನ್ನು ನೀಡುತ್ತಾ ನ್ಯಾಯಾಧೀಶೆ ಆಯುಮಿ ಹಿಗಾಶಿ ತಿಳಿಸಿದ್ದಾರೆ. ಮುಂದಿನ ವರ್ಷದಲ್ಲಿ ಸುಪ್ರೀಂ ಕೋರ್ಟ್ ಏಕೀಕೃತ ನಿರ್ಧಾರವನ್ನು ಹೊರಡಿಸುವ ನಿರೀಕ್ಷೆಯಿದೆ.