ಇಸ್ಲಾಮಾಬಾದ್, ನ. 12 (DaijiworldNews/AK): ಇಸ್ಲಾಮಾಬಾದ್ನಲ್ಲಿ ಕನಿಷ್ಠ 12 ಜನರ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಹೊತ್ತಿದೆ. ಮತ್ತಷ್ಟು ದಾಳಿಗಳನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದೆ.

ಇದು ದೇಶದ ರಾಜಧಾನಿಯ ಮೇಲೆ ಉಗ್ರಗಾಮಿ ಗುಂಪು ನಡೆಸಿದ ದಾಳಿಯಾಗಿದೆ. ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದ ಕಾನೂನುಗಳ ಅಡಿಯಲ್ಲಿ ತೀರ್ಪುಗಳನ್ನು ಜಾರಿಗೊಳಿಸಿದ ನ್ಯಾಯಮೂರ್ತಿಗಳು, ವಕೀಲರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು.
ಇಸ್ಲಾಮಾಬಾದ್ನಲ್ಲಿ ನ್ಯಾಯಾಲಯದ ಮೇಲೆ ದಾಳಿ ಮಾಡಲಾಗಿತ್ತು. ಎಲ್ಲರೂ ಗಾಬರಿಯಿಂದ ಒಳಗೆ ಓಡಲು ಪ್ರಾರಂಭಿಸಿದರು. ಮುಂಭಾಗದ ಗೇಟ್ನಲ್ಲಿ ಕನಿಷ್ಠ ಐದು ಮೃತದೇಹಗಳು ಬಿದ್ದಿರುವುದನ್ನು ನಾನು ನೋಡಿದ್ದೇನೆ ಎಂದು ವಕೀಲ ಮತ್ತು ಪ್ರತ್ಯಕ್ಷದರ್ಶಿ ಮೊಹಮ್ಮದ್ ಶಹಜಾದ್ ತಿಳಿಸಿದ್ದಾರೆ.
ಸೋಮವಾರ ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿ 20 ಜನರು ಗಾಯಗೊಂಡ ನಂತರ ಈ ಘಟನೆ ಸಂಭವಿಸಿದೆ. ಪಾಕಿಸ್ತಾನದಲ್ಲಿ ಕೊನೆಯ ಆತ್ಮಹತ್ಯಾ ದಾಳಿ ನಡೆದಿದ್ದು ಡಿಸೆಂಬರ್ 2022 ರಲ್ಲಿ. ಜನರ ಸಾವಿಗೆ ಕಾರಣವಾದ ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತವೇ ಕಾರಣವೆಂದು ಆರೋಪ ಮಾಡಿದ್ದಾರೆ. ಅಫ್ಘಾನಿಸ್ತಾನದ ಗಡಿಯ ಬಳಿಯ ವಾನಾದ ಕ್ಯಾಡೆಟ್ ಕಾಲೇಜಿನ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಭಾರತದ ಪಾತ್ರವಿದೆ ಎಂದು ಅವರು ಆರೋಪಿಸಿದ್ದಾರೆ.