ವಾಷಿಂಗ್ಟನ್, ನ. 09 (DaijiworldNews/AA): ಅಮೆರಿಕ ಹಾಗೂ ಜಾರ್ಜಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಇಬ್ಬರು ಮೋಸ್ಟ್ ವಾಂಟೆಡ್ ದರೋಡೆಕೋರರನ್ನು ಭಾರತೀಯ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಬಂಧಿತರಲ್ಲಿ ಓರ್ವ ಆರೋಪಿ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.

ವೆಂಕಟೇಶ್ ಗಾರ್ಗ್ ಹಾಗೂ ಭಾನು ರಾಣಾ ಬಂಧಿತರು.
ಹರಿಯಾಣ ಪೊಲೀಸರು ಹಾಗೂ ಭದ್ರತಾ ಸಂಸ್ಥೆಯ ಅಧಿಕಾರಿಗಳು ವೆಂಕಟೇಶ್ ಗಾರ್ಗ್ನನ್ನು ಜಾರ್ಜಿಯಾದಲ್ಲಿ, ಭಾನು ರಾಣಾನನ್ನು ಅಮೆರಿಕದಲ್ಲಿ ಬಂಧಿಸಿದ್ದಾರೆ. ರಾಣಾ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಗಾರ್ಗ್ ಮತ್ತು ರಾಣಾ ಇಬ್ಬರೂ ಶೀಘ್ರದಲ್ಲೇ ಭಾರತಕ್ಕೆ ಗಡೀಪಾರಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೆಂಕಟೇಶ್ ಗಾರ್ಗ್ ಬಿಎಸ್ಪಿ ನಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದ. ಈತ ಹರಿಯಾಣದ ನಾರಾಯಣಗಢದ ನಿವಾಸಿಯಾಗಿದ್ದ. ಪ್ರಸ್ತುತ ಜಾರ್ಜಿಯಾದಲ್ಲಿ ವಾಸಿಸುತ್ತಿರುವ ಇವನ ವಿರುದ್ಧ ಭಾರತದಲ್ಲಿ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತ ತನ್ನ ಗ್ಯಾಂಗ್ಗೆ ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಭಾರತದ ಇತರ ರಾಜ್ಯಗಳಿಂದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಪ್ರಸ್ತುತ ವಿದೇಶದಲ್ಲಿ ವಾಸಿಸುತ್ತಿರುವ ಗಾರ್ಗ್ ದರೋಡೆಕೋರ ಕಪಿಲ್ ಸಾಂಗ್ವಾನ್ ಜೊತೆ ಸುಲಿಗೆ ಗ್ಯಾಂಗ್ ನಡೆಸುತ್ತಿದ್ದ. ಅಕ್ಟೋಬರ್ನಲ್ಲಿ, ದೆಹಲಿ ಪೊಲೀಸರು ಸಂಗ್ವಾನ್ನ ನಾಲ್ವರು ಶೂಟರ್ಗಳನ್ನು ಅರೆಸ್ಟ್ ಮಾಡಿದ್ದರು. ಬಂಧಿತ ಶೂಟರ್ಗಳು ಫಾರ್ಮ್ ಹೌಸ್ ಒಂದರ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳಲಾಗಿದೆ.