ಕೀವ್, ನ. 02 (DaijiworldNews/AK):ರಷ್ಯಾದ ಸೇನೆಗೆ ಇಂಧನ ಪೂರೈಸುವ ಪ್ರಮುಖ ಇಂಧನ ಪೈಪ್ ಲೈನ್ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ನ ಪಡೆಗಳು ಹೇಳಿವೆ.

ರಯಝಾನ್, ನಿಝ್ನಿ, ನೊವ್ಗೊರೊಡ್ ಮತ್ತು ಮಾಸ್ಕೋ ನಗರಗಳ ರಿಫೈನರಿಗಳಿಂದ ಗ್ಯಾಸೊಲಿನ್, ಡೀಸೆಲ್ ಮತ್ತು ಜೆಟ್ ಇಂಧನಗಳನ್ನು ಸೇನೆಗೆ ಪೂರೈಸುವ 400 ಕಿ.ಮೀ ವ್ಯಾಪ್ತಿಯ ಕೊಲ್ಟ್ಸೆವಾಯ್ ಪೈಪ್ ಲೈನ್ ಮೇಲೆ ರಮೆಂಸ್ಕಿ ಜಿಲ್ಲಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ಪೈಪ್ ಲೈನ್ ಗೆ ವ್ಯಾಪಕ ಹಾನಿಯಾಗಿದೆ.
ಈ ಪೈಪ್ ಲೈನ್ ವಾರ್ಷಿಕ ಸುಮಾರು 3 ದಶಲಕ್ಷ ಟನ್ ಗಳಷ್ಟು ಜೆಟ್ ಇಂಧನ, 2.8 ದಶಲಕ್ಷ ಟನ್ ಗಳಷ್ಟು ಡೀಸೆಲ್ ಮತ್ತು 1.6 ದಶಲಕ್ಷ ಟನ್ ಗಳಷ್ಟು ಜೆಟ್ ಇಂಧನ, 2.8 ದಶಲಕ್ಷ ಟನ್ ಗಳಷ್ಟು ಡೀಸೆಲ್ ಮತ್ತು 1.6 ದಶಲಕ್ಷ ಟನ್ ಗಳಷ್ಟು ಗ್ಯಾಸೊಲಿನ್ ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಉಕ್ರೇನ್ ನ ಅಧಿಕಾರಿಗಳನ್ನು ಉಲ್ಲೇಖ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.