ಕಾಬುಲ್, ಅ. 31 (DaijiworldNews/AA): ಇಸ್ಲಾಮಾಬಾದ್ ತನ್ನ ಆಂತರಿಕ ಸಂಘರ್ಷಗಳನ್ನು ಡ್ಯುರಾಂಡ್ ರೇಖೆಯಾದ್ಯಂತ ಹೆಚ್ಚಿಸುತ್ತಿದೆ. ಪಾಕಿಸ್ತಾನವು ಹೀಗೆ ಮುಂದುವರೆದರೆ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಅವರು ಎಚ್ಚರಿಕೆ ನೀಡಿದ್ದಾರೆ.

ಅಗ್ನಿಶಾಮಕ ನಿರ್ದೇಶನಾಲಯದ ತರಬೇತಿ ಸೆಮಿನಾರ್ನ ಸಮಾರೋಪ ಅಧಿವೇಶನದಲ್ಲಿ ಮಾತನಾಡಿದ ಅವರು, "ಅಫ್ಘಾನಿಸ್ತಾನದ ಜನರಿಗೆ ಆಂತರಿಕ ಸಮಸ್ಯೆಗಳಿರಬಹುದು. ಆದರೆ, ಅವರು ವಿದೇಶಿ ಆಕ್ರಮಣದ ವಿರುದ್ಧ ಒಗ್ಗಟ್ಟಾಗಿದ್ದಾರೆ. ನೀವು ನಿಮ್ಮ ಸಮಸ್ಯೆಗಳನ್ನು ಅಫ್ಘಾನಿಸ್ತಾನಕ್ಕೆ ತಂದು ಇಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸುತ್ತಿದ್ದೀರಿ. ಈ ತಪ್ಪಿನಿಂದ ನೀವು ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಸೀಮಿತ ಶಸ್ತ್ರಾಸ್ತ್ರಗಳ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿದ್ಧವಾಗಿರುವ ರಾಷ್ಟ್ರವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ನಮ್ಮಲ್ಲಿ ದೀರ್ಘ-ಶ್ರೇಣಿಯ ಕ್ಷಿಪಣಿಗಳು ಅಥವಾ ಶಕ್ತಿಶಾಲಿ ಶಸ್ತ್ರಾಸ್ತ್ರಗಳಿಲ್ಲ. ಆದರೆ, ನಮ್ಮ ದೃಢನಿಶ್ಚಯ ಪ್ರಬಲವಾಗಿದೆ" ಎಂದು ಹಕ್ಕಾನಿ ನೆಟ್ವರ್ಕ್ನ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ ತಿಳಿಸಿದ್ದಾರೆ.