ದುಬೈ, ಅ. 30(DaijiworldNews/TA): ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇ ವರ್ಷದ "ದುಬೈ ಗಡಿನಾಡ ಉತ್ಸವ-2025" ಕಾರ್ಯಕ್ರಮ ದುಬೈ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ನಡೆಯಿತು.




ಕರ್ನಾಟಕ ಜಾನಪದ ಪರಿಷತ್ ಮಂಗಳೂರಿನ ಅಧ್ಯಕ್ಷ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ಯಕ್ಷಗಾನದ ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಸು ಶೆಟ್ಟಿ ದುಬೈ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಗಲ್ಫ್ ಘಟಕಗಳ ಮುಖ್ಯ ಸಂಚಾಲಕ ಅಶ್ರಫ್ ಶಾಮಾಂತುರು, ದುಬೈ ಘಟಕದ ಗೌರವಾಧ್ಯಕ್ಷ ನ್ಯಾಯಮೂರ್ತಿ ಇಬ್ರಾಹಿಂ ಖಲೀಲ್, ಅಧ್ಯಕ್ಷ ಅಮರ್ ದೀಪ ಕಲ್ಲುರಾಯ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಗಡಿನಾಡ ಗಾಯಕ ಗಾಯಕಿಯರಿಂದ ಸಂಗೀತ ಸುಧೆ, ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದವರಿಂದ ಶ್ರೀ ಕೃಷ್ಣ ಬಾಲಲೀಲೆ ಯಕ್ಷಗಾನ, ದಫ್ ಮುಟ್ ಕಾರ್ಯಕ್ರಮಗಳು ಮೆರುಗು ನೀಡಿತು. ರಾತ್ರಿ ನಡೆದ ಸಮಾರೋಪ ಸಮಾರಂಭ ಕರ್ನಾಟಕ ಹೆಲ್ತ್ ಕೇರ್ ಕೌನ್ಸಿಲ್ ನ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಮುಖ್ಯ ಅತಿಥಿಯ ಉಪಸ್ಥಿತಿಯಲ್ಲಿ ನಡೆಯಿತು. ಕಾಸರಗೋಡಿನ ಶಾಸಕರಾದ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕರಾದ ಎ.ಕೆ.ಎಂ.ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶಿವರಡ್ಡಿ ಕ್ಯಾಡೆಡ್ ರವರು ಸಾಧಕರಾದ ಮಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ, ಬಿ.ಎಂ.ಗ್ರೂಪ್ ನ ಆಡಳಿತ ನಿರ್ದೇಶಕರಾದ ಡಾ.ವಿ.ಕನಕರಾಜ್, ಮ್ಯಾಕ್ ಕ್ಯಾರ್ ಕ್ಲಿನಿಕ್ ದುಬೈ ಆಡಳಿತ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್, ಉದ್ಯಮಿ ಸಂದೀಪ್ ಶೆಟ್ಟಿ ಯವರನ್ನು ಗಡಿನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರಿನ ಉದ್ಯಮಿ ಕಟಪಾಡಿ ಸತ್ಯೆಂದ್ರ ಪೈ, ಕ್ರಿಯೆಟಿವ್ ಕ್ಯಾಟರ್ ಹಾಸ್ಪಿಟಲಿಟಿನ ಆಡಳಿತ ನಿರ್ದೇಶಕರಾದ ಮಂಜುನಾಥ ರಾಜನ್, ಕರ್ನಾಟಕ ಜಾನಪದ ಪರಿಷತ್ ಒಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಅವರ ಸಾಧನೆಯನ್ನು ಗುರುತಿಸಿ ಸಾಧಕ ಸನ್ಮಾನ ಮಾಡಿ ಗೌರವಿಸಲಾಯಿತು ಮತ್ತು ದುಬೈಯ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ದುಬೈ ಕನ್ನಡ ಪಾಠ ಶಾಲೆಯನ್ನು ಸಾಧಕ ಸಂಸ್ಥೆ ಎಂದು ಸನ್ಮಾನಿಸಿ ಗೌರವಿಸಲಾಯಿತು.