ದುಬೈ, ಅ. 14 (DaijiworldNews/TA): ಯುಎಇಯಲ್ಲಿ ಇರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತ ಬಂದಿರುವ ಗಮ್ಮತ್ ಕಲಾವಿದೆರ್ ದುಬೈ ಯುಎಇ ತಂಡವು ಈ ಭಾರಿ ಅತ್ಯುತ್ತಮ ಪ್ರದರ್ಶನ ನೀಡಿ ಕಲಾಭಿಮಾನಿಗಳ ಮನಗೆದ್ದಿದೆ. ಅಕ್ಟೋಬರ್ ಹನ್ನೊಂದರಂದು ಸಂಜೆ ನಗರದ ಎಮಿರೇಟ್ಸ್ ಥೀಯೇಟರ್ ಉಮ್ ಅಲ್ ಸೈಫ್ ನ ಸಭಾಂಗಣದಲ್ಲಿ ಗಮ್ಮತ್ ಕಲಾವಿದೆರ್ ದುಬೈನ 14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ "ಪೋನಗ ಕೊನೊಪರಾ..?" ಎಂಬ ತುಳು ನಾಟಕ ಪ್ರಥಮ ಪ್ರದರ್ಶನಗೊಂಡಿದ್ದು "ಹೌಸ್ ಪುಲ್ ಶೋ" ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.









ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಡಾ.ಬಿ ಆರ್ ಶೆಟ್ಟಿ, ಪ್ರಖ್ಯಾತ ಜ್ಯೋತಿಷ್ಯರು ಮುಂಬಯಿ,ಸೈನ್ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಎಂ.ಜೆ.ಪ್ರವೀಣ್ ಭಟ್, ಖ್ಯಾತ ಮುಳುಗು ತಜ್ಞ ,ಸಮಾಜ ಸೇವಕರಾದ ಈಶ್ವರ್ ಮಲ್ಪೆ, ದೈಜಿವಲ್ಡ್ ವಾಹಿನಿಯ ಸಂಪಾದಕರಾದ ವಾಲ್ಟರ್ ನಂದಳಿಕೆ, ಐವರಿ ಗ್ರ್ಯಾಂಡ್ ನ ಮ್ಯಾನೇಜಿಂಗ್ ನಿರ್ದೇಶಕರಾದ ಮೈಕಲ್ ಡಿಸೋಜಾ, ತುಳು ಸಿನಿಮಾ ಕಜ್ಜ ದ ನಿರ್ಮಾಪಕ ವಿಶಾಂತ್ ಮಿನೇಜಸ್, ಯುಎಇ ಬಂಟ್ಸ್ ಅಧ್ಯಕ್ಷರು ಪ್ರವೀಣ್ ಶೆಟ್ಟಿ,ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ಥಂ ಶೆಟ್ಟಿ, ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಹರೀಶ್ ಶೇರಿಗಾರ್ ಆಗಮಿಸಿ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಗಮ್ಮತ್ ಕಲಾವಿದೆರ್ ತಂಡದ ಹಿರಿಯ ಕಲಾವಿದರಾದ ಜಸ್ಮಿತ ವಿವೇಕ್ ಮತ್ತು ಮೋನಪ್ಪ ಪೂಜಾರಿ ದಂಪತಿಗಳಿಗೆ ಅವರು ತುಳುರಂಗ ಭೂಮಿಗೆ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು.ಇನ್ನು ಇದೇ ಸಂದರ್ಭದಲ್ಲಿ ಖ್ಯಾತ ಮುಳುಗು ತಜ್ಞ ,ಸಮಾಜ ಸೇವಕರಾದ ಈಶ್ವರ್ ಮಲ್ಪೆ ಅವರನ್ನು ಕೂಡ ಸನ್ಮಾನಿಸಿ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ "ತುಳುನಾಡ ಸೇವಾಗ್ರೇಸರೆ" ಎಂಬ ಬಿರುದನ್ನು ನೀಡಿ ಬಳಿಕ ಗಮ್ಮತ್ ಕಲಾವಿದೆರ್ ತಂಡದಿಂದ ಅವರ ಕುಟುಂಬಕ್ಕೆ ಸಹಾಯಸ್ತ ನೀಡಲಾಯಿತು.
ಈ ನಾಟಕವು ದಿನಕರ್ ಭಂಡಾರಿ ಕಣಂಜರ್ ಅವರ ಮೂಲ ಕಥೆಯಾಗಿದ್ದು, ನಾಟಕವನ್ನು ರಂಗ ಸಾರಥಿ ವಿಶ್ವನಾಥ ಶೆಟ್ಟಿ ನಿರ್ದೇಶಿಸಿದ್ದು, ಖ್ಯಾತ ರಂಗ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ರಚನೆಯಲ್ಲಿ "ಪೋನಗ ಕೊನೊಪರಾ" ಈ ನಾಟಕವು ವಿಶೇಷ ಶೈಲಿಯಲ್ಲಿ ಮೂಡಿಬಂದಿದೆ. ಇನ್ನು ಮೊದಲ ಪ್ರದರ್ಶನದಲ್ಲೇ ಪೋನಗ ಕೋನಪರ ನಾಟಕ ಪ್ರೇಕ್ಷಕರ ಮನಗೆದ್ದಿದ್ದು, ಈಗ ನಾಟಕ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ ಎನ್ನಲಾಗಿದೆ. ವೇದಿಕೆಯಲ್ಲಿ ಗಮ್ಮತ್ ಕಲಾವಿದೆರ್ ಸಂಘದ ಅಧ್ಯಕ್ಷರಾದ ಲಾವಿನ ಫರ್ನಾಂಡಿಸ್, ಕಾರ್ಯದರ್ಶಿ ದೀಪ್ತಿ ದಿನರಾಜ್ ಶೆಟ್ಟಿ ,ಖಜಾಂಜಿ ಜೇಶ್ ಬಯ್ಯಾರ್, ಮಹಾಪೋಷಕರು ಹರೀಶ್ ಬಂಗೇರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜೇಶ್ ಕುತ್ತಾರ್ ಮತ್ತು ಚಿತ್ರ ಶೆಟ್ಟಿ ನಡೆಸಿಕೊಟ್ಟರು.