ದುಬೈ, 28 (DaijiworldNews/TA): ಉಪ್ಪಿನಂಗಡಿಯಲ್ಲಿನ ಬಜತ್ತೂರು ಗ್ರಾಮದ ಅರ್ಬಿ ಮನೆ ನಿವಾಸಿ ತಿಲಕಾನಂದ ಪೂಜಾರಿ ಅಲಿಯಾಸ್ ಪ್ರಶಾಂತ್ ಪೂಜಾರಿ(33) ಅವರು ದುಬೈಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರ ಮೃತದೇಹ ಸೆ.27ರಂದು ಸ್ವಗ್ರಾಮಕ್ಕೆ ಆಗಮಿಸಿದೆ.

ದುಬೈಯಲ್ಲಿ ಉದ್ಯಮಿಯಾಗಿದ್ದ ಪ್ರಶಾಂತ್ ವಾರದ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಕಾನೂನಿನ ತೊಡಕುಂಟಾಗಿತ್ತು. ಈ ಬಗ್ಗೆ ಸ್ಪಂದನೆ ತೋರಿದ ದ.ಕ. ಮೂಲದ ಸಮದ್ ಬಿರಾಲಿ ಮತ್ತಿತರ ಯುವಕರ ತಂಡ ಅಗತ್ಯ ದಾಖಲೆಗಳನ್ನು ಸಿದ್ಧಗೊಳಿಸಿ ದುಬೈಯಲ್ಲಿ ಸರಕಾರದ ಅನುಮತಿ ಪಡೆದು ಮೃತದೇಹವನ್ನು ಭಾರತಕ್ಕೆ ಕಳುಹಿಸುವಲ್ಲಿ ಯಶಸ್ಸು ಸಾಧಿಸಿತ್ತು.
ಅದರಂತೆ ಸೆ.27ರ ಬೆಳಗ್ಗೆ ವಿಮಾನನಿಲ್ದಾಣಕ್ಕೆ ಆಗಮಿಸಿದ ಮೃತದೇಹವನ್ನು ಬಜತ್ತೂರಿಗೆ ಕರೆತರಲಾಯಿತು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.