ವಾಷಿಂಗ್ಟನ್,ಸೆ. 24 (DaijiworldNews/AK): ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 71 ವರ್ಷದ ವೃದ್ಧನನ್ನು ಭಾರತೀಯ ಮೂಲದ ವ್ಯಕ್ತಿ ಇರಿದು ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾದ ಫ್ರೀಮಾಂಟ್ನಲ್ಲಿ 71 ವರ್ಷದ ನೋಂದಾಯಿತ ಲೈಂಗಿಕ ಅಪರಾಧಿ ಡೇವಿಡ್ ಬ್ರಿಮ್ಮರ್ನನ್ನು ಇರಿದು ಕೊಂದ ಆರೋಪದ ಮೇಲೆ 29 ವರ್ಷದ ಭಾರತೀಯ ಮೂಲದ ವರುಣ್ ಸುರೇಶ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.
ಘಟನಾ ಸ್ಥಳದಲ್ಲಿ ಸುರೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಾಕು ವಶಪಡಿಸಿಕೊಳ್ಳಲಾಗಿದೆ. ‘ಚಿಕ್ಕ ಮಕ್ಕಳಿಗೆ ಡೇವಿಡ್ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅವನು ಸಾಯುವುದಕ್ಕೇ ಅರ್ಹ. ಅವನನ್ನು ಕೊಲ್ಲಲು ಬಹಳ ದಿನಗಳಿಂದ ಕಾಯುತ್ತಿದ್ದೆ’ ಎಂದು ಆರೋಪಿ ಸುರೇಶ್ ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾನೆ.
1995 ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕಾಗಿ ಡೇವಿಡ್ ಬ್ರಿಮ್ಮರ್ 9 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದ. ಅವನನ್ನು ಪತ್ತೆಹಚ್ಚಲು ಸುರೇಶ್ ಕ್ಯಾಲಿಫೋರ್ನಿಯಾದ ಮೇಗನ್ ಕಾನೂನು ಡೇಟಾಬೇಸ್ ಅನ್ನು ಬಳಸಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.