ವಾಷಿಂಗ್ಟನ್, ಸೆ. 15 (DaijiworldNews/AK):ಅಕ್ರಮ ವಲಸಿಗ ಅಪರಾಧಿಗಳ ಬಗ್ಗೆ ಮೃದು ಧೋರಣೆ ತೋರುವ ಸಮಯ ನಮ್ಮ ಆಡಳಿತದಲ್ಲಿ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇತ್ತೀಚೆಗೆ ಡಲ್ಲಾಸ್ ನಗರದಲ್ಲಿ ನಡೆದ ಕರ್ನಾಟಕ ಮೂಲದ ಚಂದ್ರ ನಾಗಮಯ್ಯಲ್ಲಯ್ಯ ಶಿರಚ್ಛೇದದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್ನಲ್ಲಿ ಪ್ರತಿಕ್ರಿಯಿಸಿದ್ದು, ಪ್ರಕರಣದ ಆರೋಪಿಯ ಮೇಲೆ ಫಸ್ಟ್ ಗ್ರೇಡ್ನ ಕೊಲೆ ಆರೋಪ ಹೊರಿಸಲಾಗುವುದು. ಜೊತೆಗೆ ಕಾನೂನಿನ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಟೆಕ್ಸಾಸ್ನ ಡಲ್ಲಾಸ್ನಲ್ಲಿ ಚಂದ್ರ ನಾಯಮಲ್ಲಯ್ಯ ಅವರ ಹತ್ಯೆಯ ಕುರಿತಾದ ಭಯಾನಕ ವರದಿಗಳ ಬಗ್ಗೆ ನನಗೆ ತಿಳಿದಿದೆ. ಕ್ಯೂಬಾದ ಅನ್ಯಕೋಮಿನ ವ್ಯಕ್ತಿಯೊಬ್ಬ ನಾಗಮಲ್ಲಯ್ಯ ಅವರ ಪತ್ನಿ ಮತ್ತು ಮಗನ ಮುಂದೆಯೇ ಕ್ರೂರವಾಗಿ ಶಿರಚ್ಛೇದ ಮಾಡಿದ್ದಾನೆ. ಅವನು ನಮ್ಮ ದೇಶದಲ್ಲಿ ಎಂದಿಗೂ ಇರಬಾರದು ಎಂದಿದ್ದಾರೆ.
ಅಲ್ಲದೇ ಕ್ಯೂಬನ್ ಪ್ರಜೆಯಾದ ದುಷ್ಟನನ್ನ ಕ್ಯೂಬಾ ದೇಶವೇ ತನ್ನಲ್ಲಿ ಇರಿಸಿಕೊಳ್ಳಲು ಬಯಸಲಿಲ್ಲ. ಹಾಗಾಗಿ ಈ ಹಿಂದೆ ಅಸಮರ್ಥ ಜೋ ಬೈಡನ್ ಅವರ ಅಡಿಯಲ್ಲಿ ನಮ್ಮ ದೇಶಕ್ಕೆ ಬಿಡುಗಡೆ ಮಾಡಿದರು. ಆದ್ರೆ ಈ ಅಕ್ರಮ ವಲಸೆ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವ ಸಮಯ ನನ್ನ ಮೃದು ಧೋರಣೆ ಈಗ ಮುಗಿದಿದೆ ಎಂದು ಹೇಳಿದರು.