ವಾಷಿಂಗ್ಟನ್, ಆ. 01 (DaijiworldNews/AK): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರದ ವ್ಯಾಪಾರ ಒಪ್ಪಂದದ ಗಡುವಿಗೆ ಮುಂಚಿತವಾಗಿ ವ್ಯಾಪಾರ ಪಾಲುದಾರರ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆದೇಶದ ಪ್ರಕಾರ, 69 ವ್ಯಾಪಾರ ಪಾಲುದಾರರಿಗೆ ಶೇಕಡಾ 10 ರಿಂದ 41 ಕ್ಕೆ ಹೆಚ್ಚಿನ ಆಮದು ಸುಂಕ ದರಗಳು ಏಳು ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಆದೇಶಕ್ಕೆ ಸಹಿ ಹಾಕುವಾಗ, ವರ್ಷಗಳಿಂದ ನಡೆಯುತ್ತಿರುವ ವ್ಯಾಪಾರ ಅಸಮತೋಲನ ತೆಗೆದುಹಾಕಲು ಮತ್ತು ಅಮೆರಿಕದ ಆರ್ಥಿಕ ಭದ್ರತೆ ಬಲಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಸಿರಿಯಾದ ಮೇಲೆ ಶೇಕಡಾ 41, ಕೆನಡಾದ ಅನೇಕ ಸರಕುಗಳ ಮೇಲೆ ಶೇಕಡಾ 35, ಬ್ರೆಜಿಲ್ಗೆ ಶೇಕಡಾ 50, ಭಾರತಕ್ಕೆ ಶೇಕಡಾ 25, ತೈವಾನ್ಗೆ ಶೇಕಡಾ 20 ಮತ್ತು ಸ್ವಿಟ್ಜರ್ಲ್ಯಾಂಡ್ಗೆ ಶೇಕಡಾ 39 ರಷ್ಟು ಸುಂಕಗಳು ಇದ್ದವು. ಏತನ್ಮಧ್ಯೆ, ಪಾಕಿಸ್ತಾನದ ಆಮದುಗಳ ಮೇಲಿನ ಸುಂಕಗಳನ್ನು ಶೇಕಡಾ 29 ರಿಂದ 19 ಕ್ಕೆ ಇಳಿಸಲಾಗಿದೆ . ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಮೇಲೆ 20%, ದಕ್ಷಿಣ ಆಫ್ರಿಕಾದ ಮೇಲೆ 30% ಮತ್ತು ಸ್ವಿಟ್ಜರ್ಲೆಂಡ್ನ ಮೇಲೆ 39% ರಷ್ಟು ಅತ್ಯಧಿಕ ಸುಂಕ ವಿಧಿಸಲಾಗಿದೆ. ಅಲ್ಲದೆ, ಕ್ಯಾಮರೂನ್, ಚಾಡ್, ಇಸ್ರೇಲ್, ಟರ್ಕಿಯೆ, ವೆನೆಜುವೆಲಾ ಮತ್ತು ಲೆಸೊಥೊ ದೇಶಗಳ ಮೇಲೆ 15% ಸುಂಕ ವಿಧಿಸಲಾಗಿದೆ. ಆದ್ರೆ ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.
40% ಸುಂಕ – ಲಾವೋಸ್, ಮ್ಯಾನ್ಮಾರ್ (ಬರ್ಮಾ), 35% ಸುಂಕ – ಇರಾಕ್, ಸೆರ್ಬಿಯಾ, 30% ಸುಂಕ – ಅಲ್ಜೀರಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಲಿಬಿಯಾ, ದಕ್ಷಿಣ ಆಫ್ರಿಕಾ, 25% ಸುಂಕ – ಭಾರತ, ಬ್ರೂನಿ, ಕಝಾಕಿಸ್ತಾನ್, ಮೊಲ್ಡೊವಾ, ಟುನೀಶಿಯಾ, 20% ಸುಂಕ – ಬಾಂಗ್ಲಾದೇಶ, ಶ್ರೀಲಂಕಾ, ತೈವಾನ್, ವಿಯೆಟ್ನಾಂ, 19% ಸುಂಕ – ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥೈಲ್ಯಾಂಡ್, 18% ಸುಂಕ – ನಿಕರಾಗುವಾ, 15% ಸುಂಕ, ಇಸ್ರೇಲ್, ಜಪಾನ್, ಟರ್ಕಿ, ನೈಜೀರಿಯಾ, ಘಾನಾ ಮತ್ತು ಇತರ ಹಲವು ದೇಶಗಳು, ಬ್ರೆಜಿಲ್, ಯುನೈಟೆಡ್ ಕಿಂಗ್ಡಮ್ (ಯುಕೆ), ಫಾಕ್ಲ್ಯಾಂಡ್ ದ್ವೀಪಗಳಿಗೆ 10% ಸುಂಕ ವಿಧಿಸಲಾಗಿದೆ.