ವಾಷಿಂಗ್ಟನ್, ಜೂ. 09 (DaijiworldNews/AK): ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸೆಸ್ನಾ 414 ವಿಮಾನ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಬಳಿಯ ಸಾಗರದಲ್ಲಿ ಪತನಗೊಂಡಿದೆ.

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಎರಡು ಇಂಜಿನ್ ಹೊಂದಿರುವ ಸೆಸ್ನಾ 414 (Cessna 414) ವಿಮಾನವು ಭಾನುವಾರ ಮಧ್ಯಾಹ್ನ 12:30ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಅದಾದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.
ಈ ಕುರಿತು ಯುಎಸ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸ್ಯಾನ್ ಡಿಯಾಗೋ ಬಳಿಯ ಕರಾವಳಿ ತೀರದಿಂದ 8 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದೆ. ಪಾಯಿಂಟ್ ಲೋಮಾ ಬಳಿಯ 61 ಮೀ. ಆಳದ ಪ್ರದೇಶದಲ್ಲಿ ಅವಶೇಷಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಫ್ಲೈಟ್ಅವೇರ್ ವೆಬ್ಸೈಟ್ನಲ್ಲಿ ವಿಮಾನ ಟ್ರ್ಯಾಕಿಂಗ್ ಪರಿಶೀಲಿಸಿದಾಗ ಅದು ಫೀನಿಕ್ಸ್ಗೆ ತೆರಳುತ್ತಿತ್ತು ಎಂದು ತೋರಿಸಿದೆ. ಇನ್ನೂ ಈ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ.