ಮುಂಬೈ, ನ.08 (DaijiworldNews/AA): ಬಾಲಿವುಡ್ ತಾರಾ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದೀಪಾವಳಿ ಹಬ್ಬದಂದು ತಮ್ಮ ಮಗ ವಿಹಾನ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೇ ಮೊದಲ ಬಾರಿಗೆ ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ.

ಕತ್ರಿನಾ ಕೈಫ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, 'ನಮ್ಮ ಪಾಲಿನ ಅತ್ಯಂತ ಪ್ರಕಾಶಮಾನವಾದ ದೀಪಾವಳಿ ಇದು. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷ ಸಿಗಲಿ' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಮಗ ವಿಹಾನ್ ಮೊದಲ ಹುಟ್ಟುಹಬ್ಬದ ಮರುದಿನವೇ ಮಗನ ಜೊತೆಗಿನ ಮೊದಲ ಸ್ಪಷ್ಟವಾದ ಫ್ಯಾಮಿಲಿ ಫೋಟೋವನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಮೂವರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.
ವಿಹಾನ್ನ ಮೊದಲ ಫೋಟೋ ಕಂಡು ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಕಿಯಾರಾ ಅಡ್ವಾಣಿ, ಅಥಿಯಾ ಶೆಟ್ಟಿ, ಅನನ್ಯಾ ಪಾಂಡೆ, ಅರ್ಜುನ್ ಕಪೂರ್, ರಾಕುಲ್ ಪ್ರೀತ್ ಸಿಂಗ್, ಮೃಣಾಲ್ ಠಾಕೂರ್, ಸೋನಂ ಕಪೂರ್ ಸೇರಿದಂತೆ ಹಲವು ಗಣ್ಯರು ಕಾಮೆಂಟ್ ಮೂಲಕ ಶುಭಾಶಯ ಕೋರಿದ್ದಾರೆ.