ಮುಂಬೈ, ನ.07 (DaijiworldNews/AK): ಬಾಲಿವುಡ್ನ ತಾರಾ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಪುತ್ರಿ ರಹಾ ಕಪೂರ್ ಅವರ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ.

‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾದ ಮಾರನೇ ದಿನವೇ ಈ ಸಂಭ್ರಮ ನಡೆದಿದೆ. ಆಲಿಯಾ ಭಟ್ ಅವರು ಹುಟ್ಟುಹಬ್ಬದ ಸಂಭ್ರಮದ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ರಹಾಳಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ರಣಬೀರ್ ಕಪೂರ್ ತಮ್ಮ ಮಗಳನ್ನು ಎತ್ತಿಕೊಂಡಿರುವ ಫೋಟೋನ ಆಲಿಯಾ ಶೇರ್ ಮಾಡಿದ್ದಾರೆ. ಮಗಳ ಜೊತೆಗೂಡಿ ದಂಪತಿ ಕೇಕ್ ಕತ್ತರಿಸಿದ್ದಾರೆ. ಆಚರಣೆಗಾಗಿ ಹಲವು ಬಣ್ಣ ಬಣ್ಣದ ಸುಂದರ ಕೇಕ್ಗಳನ್ನು ಸಿದ್ಧಪಡಿಸಲಾಗಿತ್ತು. ರಹಾ ಹೂವಿನ ವಿನ್ಯಾಸದ ಮುದ್ದಾದ ಫ್ರಾಕ್ ಧರಿಸಿ ಕಂಗೊಳಿಸುತ್ತಿದ್ದಾಳೆ. ಆಲಿಯಾ ಕೂಡ ಸಮ್ಮರ್ ಡ್ರೆಸ್ನಲ್ಲಿ ಮಿಂಚಿದರೆ, ರಣಬೀರ್ ಬಿಳಿ ಟೀ ಶರ್ಟ್ನಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.
ಒಂದು ಕೇಕ್ ಮೇಲೆ ರಹಾ ಬರೆದಿದ್ದ ಕುಟುಂಬದ ಚಿತ್ರದ ವಿನ್ಯಾಸವಿದೆ. ಪುಟ್ಟ ಹುಡುಗಿ ತಂದೆ-ತಾಯಿಯ ಕೈ ಹಿಡಿದುಕೊಂಡಿರುವ ಚಿತ್ರ ಇದಾಗಿದೆ. ಮತ್ತೊಂದೆಡೆ ಆಲಿಯಾ ತಮ್ಮ ಮುದ್ದಿನ ಮಗಳಿಗೆ ಪ್ರೀತಿದ ಮುತ್ತು ನೀಡಿದ್ದಾರೆ.