ಮುಂಬೈ, ನ.02 (DaijiworldNews/AA): ಎಲಾನ್ ಮಸ್ಕ್ ಅವರಿಗಿತ 5,000 ವರ್ಷಗಳ ಹಿಂದೆಯೇ ಭಾರತದಲ್ಲಿ ಹಾರುವ ಕಾರನ್ನು ಕಂಡುಹಿಡಿಯಲಾಗಿತ್ತು ಎಂದು ಎಲಾನ್ ಮಸ್ಕ್ ಅವರ ಹೊಸ ತಂತ್ರಜ್ಞಾನ ಹಾಗೂ ರಾಮಾಯಣದ ಪುಷ್ಪಕ ವಿಮಾನವನ್ನು ಹೋಲಿಸುವ ಮೂಲಕ ನಟ ರಣಬೀರ್ ಕಪೂರ್ ಹೊಸ ಚರ್ಚೆ ಸೃಷ್ಟಿಸಿದ್ದಾರೆ.

ರಾಮಾಯಣ ಚಿತ್ರದ ವಿಶೇಷ ಸಂದರ್ಶನದಲ್ಲಿ ಪುರಾತನ ಕಾಲದ ಆಯುಧಗಳು ಮತ್ತು ಅದ್ಭುತ ವಾಹನಗಳ ಬಗ್ಗೆ ಚರ್ಚೆಯ ವೇಳೆ ಮಾತನಾಡಿದ ನಟ ರಣಬೀರ್ ಕಪೂರ್, "ಎಲಾನ್ ಮಸ್ಕ್ ಇತ್ತೀಚೆಗೆ ಹಾರುವ ಕಾರನ್ನು ಕಂಡುಹಿಡಿದಿದ್ದಾರೆ. ಆದರೆ ಭಾರತವು ಸುಮಾರು 5,000 ವರ್ಷಗಳ ಹಿಂದೆಯೇ ಇಂತಹ ಅದ್ಭುತ ಸಾಧನೆ ಮಾಡಿತ್ತು" ಎಂದು ತಿಳಿಸಿದರು.
ರಾಮಾಯಣದಲ್ಲಿ ಉಲ್ಲೇಖವಾಗಿರುವ ರಾವಣನ ಪುಷ್ಪಕ ವಿಮಾನವನ್ನು ನೆನಪಿಸಿಕೊಂಡು ರಣಬೀರ್ ಕಪೂರ್ ಈ ಹೇಳಿಕೆ ನೀಡಿದ್ದಾರೆ. ರಣಬೀರ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಲವರು ಭಾರತೀಯ ಪೌರಾಣಿಕ ಹಿನ್ನೆಲೆಯನ್ನು ಹೊಗಳಿದ್ದಾರೆ. ಇನ್ನು ಕೆಲವರು ಇದನ್ನು ವ್ಯಂಗ್ಯ ಮಾಡಿದ್ದು, ಪೌರಾಣಿಕ ಕಥೆಗೂ ಆಧುನಿಕ ವಿಜ್ಞಾನಕ್ಕೂ ವ್ಯತ್ಯಾಸವಿದೆ ಎಂದಿದ್ದಾರೆ.