ದೆಹಲಿ, ನ.01 (DaijiworldNews/AA): ತೆಲುಗು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಅವರ ನಿರ್ಮಾಣದ ಹಾರರ್ ಸಿನಿಮಾದಲ್ಲಿ ಬಾಲಿವುಡ್ ನಟಿ, ಸಂಸದೆ ಕಂಗನಾ ರಣೌತ್ ಅವರು ನಾಯಕಿಯಾಗಿ ನಟಿಸಲಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ಅವರು ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಅವರು ನಿರ್ಮಾಣ ಮಾಡಲಿರುವ ಈ ಸಿನಿಮಾ ಸಿನಿಮಾವನ್ನು ತೆಲುಗಿನ ರವಿ ಬಾಬು ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ನಟಿಸಿ ರಾಣಾ ನಿರ್ಮಾಣ ಮಾಡಲಿರುವ ಸಿನಿಮಾಕ್ಕೆ 'ಸ್ಕೇರಿ ಪಿಕ್ಚರ್' ಎಂದು ಹೆಸರಿಡಲಾಗಿದೆ.
ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ರಾಣಾ, "ಇದು ಒಂದು ಹಾರರ್ ಸಿನಿಮಾ ಆಗಿದ್ದು. ನನ್ನ ಸ್ನೇಹಿತರಾದ ರವಿ ಬಾಬು ಇದನ್ನು ನಿರ್ದೇಶಿಸುತ್ತಿದ್ದಾರೆ. ಅವರು ತೆಲುಗಿನಲ್ಲಿ ಅನೇಕ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಹಿಂದಿ ಚಲನಚಿತ್ರವಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಮೊದಲು ಇಲ್ಲಿಯೇ ಘೋಷಿಸಲಾಗಿದೆ" ಎಂದು ತಿಳಿಸಿದರು.
ಇನ್ನು ರಾಣಾ ದಗ್ಗುಬಾಟಿ ಸಿನಿಮಾ ಘೋಷಿಸಿದ ಕೆಲವೇ ಸಮಯದ ಬಳಿಕ ಸಿನಿಮಾದ ಪೋಸ್ಟರ್ ಅನ್ನು ನಟಿ ಕಂಗನಾ ರಣೌತ್ ಹಂಚಿಕೊಂಡಿದ್ದರು.