ಮುಂಬೈ, ಅ.19 (DaijiworldNews/AK): ಬಾಲಿವುಡ್ನ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಎರಡನೇ ಮಗುವಿಗೆ ಸುಂದರವಾದ ಹೆಸರೊಂದನ್ನು ಇಟ್ಟಿದ್ದಾರೆ.

ಸೆಪ್ಟೆಂಬರ್ 19ರಂದು ರಾಧಾಷ್ಟಮಿಯ ಶುಭ ದಿನದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ, ಇದೀಗ ವಿಜಯದಶಮಿ (ದಸರಾ) ಹಬ್ಬದ ವಿಶೇಷ ಸಂದರ್ಭದಲ್ಲಿ ಮಗುವಿನ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಟಾರ್ ದಂಪತಿಯು ತಮ್ಮ ಎರಡನೇ ಮಗುವಿಗೆ ದೇವಿ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಐವರಿ ಮತ್ತು ಗೋಲ್ಡನ್ ಬಣ್ಣದ ಬಟ್ಟೆಗಳಲ್ಲಿ ಕಂಗೊಳಿಸುತ್ತಿರುವ ಸುಂದರವಾದ ಫ್ಯಾಮಿಲಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೀಪಿಕಾ ಹಾಗೂ ರಣವೀರ್, ‘ಪ್ರೀತಿ ಮತ್ತು ಸಮೃದ್ಧಿಯ ಸಂಕೇತ… ದೇವಿ ಪಡುಕೋಣೆ ಸಿಂಗ್’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.
ಈ ಹಿಂದೆ ತಮ್ಮ ಮೊದಲ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದ ಈ ಜೋಡಿ, ಈಗ ಎರಡನೇ ಮಗುವಿಗೆ ದೇವಿ ಎಂದು ನಾಮಕರಣ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.