ಹೈದರಾಬಾದ್, ಅ.20 (DaijiworldNews/AA): ಭಾರತೀಯ ಪೌರಾಣಿಕ ಕಥೆಗಳನ್ನು ತೆರೆಮೇಲೆ ತರುವಲ್ಲಿ ಇದುವರೆಗೆ ಯಾರೂ ಸಂಪೂರ್ಣ ನ್ಯಾಯ ಒದಗಿಸಿಲ್ಲ ಎಂದು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ತಿಳಿಸಿದ್ದಾರೆ.

"ರಾಮಾಯಣ ಅಥವಾ ಮಹಾಭಾರತದ ನೇರ ರೂಪಾಂತರವಲ್ಲದ 'ವಾರಣಾಸಿ', ಸಾಹಸ ಮತ್ತು ಪೌರಾಣಿಕ ಅಂಶಗಳ ಸಮ್ಮಿಶ್ರಣವಾಗಿದೆ. ಮಹೇಶ್ ಬಾಬು ನಾಯಕನಾಗಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೂಲ ಕಥೆಗಳ ಬಗ್ಗೆ ಆಳವಾದ ಜ್ಞಾನವಿಲ್ಲದೆಯೂ ಪ್ರತಿಯೊಬ್ಬರೂ ಚಿತ್ರದ ಭಾವನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಇದನ್ನು ರೂಪಿಸಲಾಗಿದೆ" ಎಂದಿದ್ದಾರೆ.
"ಚಿತ್ರದಲ್ಲಿ ಮಹೇಶ್ ಬಾಬು ಅವರು ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮನ ರೂಪದಲ್ಲಿ ಮಹೇಶ್ ಬಾಬು ಅವರನ್ನು ನೋಡಿ ನನಗೆ ಮೈ ನವಿರೇಳಿತು" ಎಂದು ಹೇಳಿದ್ದಾರೆ.