ಮುಂಬೈ, ಅ.11 (DaijiworldNews/AA): ಬಾಲಿವುಡ್ನ ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಮತ್ತು ಪಾಪರಾಜಿ ಜೊತೆ ಸಂಘರ್ಷ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಜಯಾ ಬಚ್ಚನ್ ಮತ್ತು ಪಾಪರಾಜಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಜಯಾ ಬಚ್ಚನ್ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದೆ.
ವೈರಲ್ ಆದ ಈ ವಿಡಿಯೋದಲ್ಲಿ, ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರೊಂದಿಗೆ ಕಾರ್ಯಕ್ರಮವೊಂದರಿಂದ ಹೊರಬರುತ್ತಿದ್ದ ಜಯಾ ಬಚ್ಚನ್ ಅವರತ್ತ ಫೋಟೋಗ್ರಾಫರ್ಗಳು ಕ್ಯಾಮೆರಾ ಹಿಡಿದಿದ್ದಾರೆ. ಈ ವೇಳೆ ಜಯಾ ಬಚ್ಚನ್ ಫೋಟೋಗ್ರಾಫರ್ಗಳತ್ತ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ನೋಡಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೋಟೋಗ್ರಾಫರ್ ಒಬ್ಬರು, 'ಮೇಡಂ, ಯಾಕೆ ಹಾಗೆ ನೋಡುತ್ತಿದ್ದೀರಿ? ನೀವು ಅಮಿತಾಭ್ ಬಚ್ಚನ್ ಅವರ ಪತ್ನಿ ಎಂಬ ಕಾರಣಕ್ಕೆ ನಿಮ್ಮ ಫೋಟೋ ತೆಗೆದಿದ್ದೇನೆ. ಆ ಕಣ್ಣುಗಳನ್ನು ಅಮಿತಾಭ್ ಬಚ್ಚನ್ ಕಡೆ ತೋರಿಸಿ, ನನಗಲ್ಲ' ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಜಯಾ ಬಚ್ಚನ್ ಯಾವುದೇ ಪ್ರತಿಕ್ರಿಯಿಸದೆ, ಗಂಭೀರ ಮುಖಭಾವದೊಂದಿಗೆ ತಮ್ಮ ವಾಹನದತ್ತ ತೆರಳಿದ್ದಾರೆ ಎಂದು ಹೇಳಲಾಗಿದೆ. ಇನ್ನು ಘಟನೆಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.