ಮುಂಬೈ, ಸೆ.29 (DaijiworldNews/AK): ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಐಶ್ವರ್ಯಾ ರೈ ಪಾಲ್ಗೊಂಡು ಮಿಂಚಿದ್ದಾರೆ. ಅವರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈ ಫ್ಯಾಷನ್ ಶೋ ಮೂಲಕ ಐಶ್ವರ್ಯಾ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.

‘ಲೋರಿಯಲ್ ಪ್ಯಾರಿಸ್’ ಕಂಪನಿಯ ಜಾಗತಿಕ ರಾಯಭಾರಿಯಾಗಿ ಐಶ್ವರ್ಯಾ ಭಾಗವಹಿಸಿದ್ದರು. ಈ ಬಾರಿಯ ‘ವಾಕ್ ಯುವರ್ ವರ್ತ್’ ಕಲ್ಪನೆಯಡಿ ಅವರು ರ್ಯಾಂಪ್ ವಾಕ್ ಮಾಡಿದರು. ವಿಶ್ವದ ಖ್ಯಾತ ತಾರೆಗಳಾದ ಕೆಂಡಲ್ ಜೆನ್ನರ್, ಸೆಲಿನ್ ಡಿಯೋನ್ ಮತ್ತು ವಿಯೋಲಾ ಡೇವಿಸ್ ಕೂಡ ಐಶ್ವರ್ಯಾ ಜೊತೆ ಹೆಜ್ಜೆ ಹಾಕಿದರು.
ರ್ಯಾಂಪ್ ವಾಕ್ ಸಮಯದಲ್ಲಿ ಐಶ್ವರ್ಯಾ ಕಪ್ಪು ಬಣ್ಣದ ವೆಲ್ವೆಟ್ ಗೌನ್ ಧರಿಸಿದ್ದರು. ಯಾನ್ ಶೂಮೇಕರ್ ವಿನ್ಯಾಸಗೊಳಿಸಿದ ಈ ಉಡುಪಿನಲ್ಲಿ ಅವರು ರಾಜಕುಮಾರಿಯಂತೆ ಕಂಗೊಳಿಸಿದರು. ತಲೆಯ ಮೇಲಿದ್ದ ಕಿರೀಟ ಅವರ ಸೌಂದರ್ಯವನ್ನು ಹೆಚ್ಚಿಸಿತ್ತು. ಗಾಯಕಿ ಸೆಲಿನ್ ಡಿಯೋನ್ ಜೊತೆ ಐಶ್ವರ್ಯಾ ಕೈಜೋಡಿಸಿ ನರ್ತಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.