ಬೆಂಗಳೂರು, ಸೆ.24 (DaijiworldNews/AA): ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಸಿನಿಮಾದ ಹಾಡೊಂದಕ್ಕೆ ನಟ ಕಿಚ್ಚ ಸುದೀಪ್ ಮಗಳು ಗಾಯಕಿ ಸಾನ್ವಿ ಸುದೀಪ್ ಧ್ವನಿಯಾಗಿದ್ದಾರೆ.

ಮಾರ್ಕ್ ಸಿನಿಮಾದ 'ಮಸ್ತ್ ಮಲೈಕಾ' ಹಾಡಿನ ಯಶಸ್ಸಿನ ಬಳಿಕ ಸಾನ್ವಿ ಮತ್ತೊಂದು ಹಾಡಿಗೆ ಧ್ವಿನಿಯಾಗುತ್ತಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ 'ಸಿಗ್ಮಾ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ 'ಸುಲೋಚನ' ಎಂಬ ಹೊಸ ಗೀತೆಯನ್ನು ಸಾನ್ವಿ ಸುದೀಪ್ ಹಾಡಿದ್ದಾರೆ.
'ಸುಲೋಚನ' ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎಸ್.ಥಮನ್ ರಾಗ ಸಂಯೋಜನೆ ಮಾಡಿದ್ದಾರೆ. ಸಾನ್ವಿ ಸುದೀಪ್ ಗಾಯನದ ಈ ಹಾಡು ಬಿಡುಗಡೆಯಾದ ಬೆನ್ನಲ್ಲೇ ಭರ್ಜರಿ ಜನಪ್ರಿಯತೆ ಪಡೆದು ಸೂಪರ್ ಹಿಟ್ ಆಗಿದೆ.