ಬೆಂಗಳೂರು, ಸೆ.15 (DaijiworldNews/AA): ಗಾಯನ ಲೋಕದ ದಂತಕತೆ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧಾರಿತ ಸಿನಿಮಾದಲ್ಲಿ ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಅಧಿಕೃತ ಆಯ್ಕೆಯಾಗಿದ್ದಾರೆ.

'ಎಂಎಸ್ ಸುಬ್ಬುಲಕ್ಷ್ಮಿ' ಅವರ ಸಿನಿಮಾವನ್ನು ಗೀತಾ ಆರ್ಟ್ಸ್ ನವರು ನಿರ್ಮಾಣ ಮಾಡಲಿದ್ದಾರೆ. ಜೊತೆಗೆ ತೆಲುಗಿನ ಜನಪ್ರಿಯ ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್, ಸ್ಯಾಂಡಲ್ವುಡ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಸಿನಿಮಾ ಅನ್ನು ಗೌತಮ್ ತಿನರೂರಿ ನಿರ್ದೇಶನ ಮಾಡಲಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಇನ್ನು ಸೆಪ್ಟೆಂಬರ್ 16ರಂದು ಎಂಎಸ್ ಸುಬ್ಬಲಕ್ಷ್ಮಿ ಅವರ 110ನೇ ಜಯಂತಿ ಹಿನ್ನೆಲೆ ಚೆನ್ನೈನ 'ದಿ ಮ್ಯೂಸಿಕ್ ಅಕಾಡೆಮಿ'ಯಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ.