ಮೈಸೂರು, ಆ. 30 (DaijiworldNews/AA): ಸ್ಯಾಂಡಲ್ವುಡ್ನ ಹಾಸ್ಯನಟ ಚಿಕ್ಕಣ್ಣ ಅವರು ಪಾವನಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿಕ್ಕಣ್ಣ ಹಾಗೂ ಮಂಡ್ಯ ಮೂಲದ ಪಾವನಾ ಅವರನ್ನು ಕೈ ಹಿಡಿದಿದ್ದಾರೆ. ಮೈಸೂರಿನ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ.
ಈ ವಿವಾಹ ಸಮಾರಂಭಕ್ಕೆ ಅನೇಕ ನಟ-ನಟಿಯರು, ರಾಜಕೀಯ ಕ್ಷೇತ್ರದ ಗಣ್ಯರು, ನಿರ್ದೇಶಕರು, ತಂತ್ರಜ್ಞರು ಆಗಮಿಸಿದ್ದು, ನವ ದಂಪತಿಗೆ ಶುಭ ಹಾರೈಸಿದ್ದಾರೆ.