ಮುಂಬೈ, ಜೂ. 04 (DaijiworldNews/AA): 2 ವರ್ಷದ ಪ್ರೀತಿಯ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಜು.5ರಂದು ಗೌರಿ ಜೊತೆ ಮದುವೆಯಾಗುತ್ತಿರುವುದು ನಿಜ ಎಂದು ಬಾಲಿವುಡ್ ಸ್ಟಾರ್ ಅಮೀರ್ ಖಾನ್ ತಿಳಿಸಿದ್ದಾರೆ.

ಅಮೀರ್ ಖಾನ್ ಪ್ರೇಯಸಿ ಗೌರಿ ಜೊತೆ ಮದುವೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಹರಿದಾಡುತ್ತಿರುವ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಅವರು, "ಹೌದು, 2 ವರ್ಷಗಳ ಪ್ರೀತಿಯ ಬಳಿಕ ಜು.5ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಗೌರಿ ಜೊತೆ ಮದುವೆಯಾಗುತ್ತಿರುವ ಸುದ್ದಿ ನಿಜ" ಎಂದಿದ್ದಾರೆ.
ಅಮೀರ್ ಮತ್ತು ಗೌರಿ ಇಬ್ಬರು ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮೂಲಕ ಅತ್ಯಂತ ಖಾಸಗಿಯಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ಯಾವುದೇ ಅದ್ದೂರಿ ರಿಸೆಪ್ಷನ್ ಅಥವಾ ಇನ್ನಿತರ ಪಾರ್ಟಿಗಳನ್ನು ಆಯೋಜಿಸದೆ ತಮ್ಮ ವೈಯಕ್ತಿಕ ಜೀವನವನ್ನು ಅನಗತ್ಯ ಪ್ರಚಾರದಿಂದ ದೂರವಿಡಲು ನಿರ್ಧರಿಸಿದ್ದಾರೆ.